ADVERTISEMENT

ವಿಜಯ್ ಹಜಾರೆ ಟ್ರೋಫಿ: ಕ್ವಾರ್ಟರ್‌ ಫೈನಲ್‌ಗೆ ಮುಂಬೈ, ಸೌರಾಷ್ಟ್ರ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 14:07 IST
Last Updated 1 ಮಾರ್ಚ್ 2021, 14:07 IST
ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್   

ಜೈಪುರ/ಕೋಲ್ಕತ್ತ: ಮುಂಬೈ ಮತ್ತು ಸೌರಾಷ್ಟ್ರ ತಂಡಗಳು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟಕ್ಕೆ ಪ್ರವೇಶಿಸಿದವು.

ಸೋಮವಾರ ಜೈಪುರದಲ್ಲಿ ನಡೆದ ಡಿ ಗುಂಪಿನ ಕೊನೆಯ ಪಂದ್ಯದಲ್ಲಿ ಮುಂಬೈ ತಂಡವು 200 ರನ್‌ಗಳಿಂದ ಹಿಮಾಚಲ ಪ್ರದೇಶದ ವಿರುದ್ಧ ಜಯಿಸಿತು. ಗುಂಪು ಹಂತದಲ್ಲಿ ಮುಂಬೈ ಒಂದೂ ಪಂದ್ಯ ಸೋತಿಲ್ಲ.

ಕೋಲ್ಕತ್ತದಲ್ಲಿ ನಡೆದ ಇ ಗುಂಪಿನ ಅಂತಿಮ ಪಂದ್ಯದಲ್ಲಿ ಸೌರಾಷ್ಟ್ರ ತಂಡವು ಸರ್ವಿಸಸ್‌ ಎದುರು 68 ರನ್‌ಗಳಿಂದ ಸೋಲಿನ ಆಘಾತ ಅನುಭವಿಸಿತು. ಸರ್ವಿಸಸ್ ತಂಡದ ರಾಹುಲ್ ಸಿಂಗ್ ಶತಕ ದಾಖಲಿಸಿದದು ಮತ್ತು ನಾಲ್ಕು ವಿಕೆಟ್‌ಗಳನ್ನೂ ಗಳಿಸಿದರು. ಆದರೆ ಗುಂಪು ಹಂತದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿರುವ ಸೌರಾಷ್ಟ್ರ ಎಂಟರ ಘಟ್ಟಕ್ಕೆ ಪ್ರವೇಶಿಸಿತು.

ADVERTISEMENT

ಸಂಕ್ಷಿಪ್ತ ಸ್ಕೋರು

ಡಿ ಗುಂಫು: ಜೈಪುರ: ಮುಂಬೈ: 50 ಓವರ್‌ಗಳಲ್ಲಿ 9ಕ್ಕೆ321 (ಸೂರ್ಯಕುಮಾರ್ ಯಾದವ್ 91, ಆದಿತ್ಯ ತಾರೆ 91, ಶಾರ್ದೂಲ್ ಠಾಕೂರ್ 92, ರಿಷಿ ಧವನ್ 84ಕ್ಕೆ4, ಪಂಕಜ್ ಜೈಸ್ವಾಲ್ 65ಕ್ಕೆ3) ಹಿಮಾಚಲಪ್ರದೇಶ: 24.1 ಓವರ್‌ಗಳಲ್ಲಿ 121 (ಏಕಾಂತ್ ಸೇನ್ 21, ಪ್ರವೀಣ ಠಾಕೂರ್ 22, ಮಯಂಕ್ ಡಾಗರ್ ಔಟಾಗದೆ 38, ಧವಳ್ ಕುಲಕರ್ಣಿ 8ಕ್ಕೆ2, ಶಮ್ಸ್ ಮಲಾನಿ 42ಕ್ಕೆ3, ಪ್ರಶಾಂತ್ ಸೋಳಂಕಿ 31ಕ್ಕೆ4) ಫಲಿತಾಂಶ: ಮುಂಬೈ ತಂಡಕ್ಕೆ 200 ರನ್‌ಗಳ ಜಯ.

ರಾಜಸ್ಥಾನ: 48.2 ಓವರ್‌ಗಳಲ್ಲಿ 294 (ಮಣಿಂದರ್ ಸಿಂಗ್ 73, ಶಿವಾ ಚೌಹಾನ್ 42, ಅರ್ಜಿತ್ ಗುಪ್ತಾ 78, ಸಂಪತ್ ಜೋಶಿ 22, ಸಿಮ್ರಂಜೀತ್ ಸಿಂಗ್ 36ಕ್ಕೆ4, ಸಂಗ್ವಾನ್ 62ಕ್ಕೆ3) ದೆಹಲಿ: 44.4 ಓವರ್‌ಗಳಲ್ಲಿ 2ವಿಕೆಟ್‌ಗಳಿಗೆ 296 (ಧ್ರುವ ಶೋರೆ 31, ಶಿಖರ್ ಧವನ್ 44, ಹಿಮ್ಮತ್ ಸಿಂಗ್ ಔಟಾಗದೆ 117, ನಿತೀಶ್ ರಾಣಾ ಔಟಾಗದೆ 88) ಫಲಿತಾಂಶ:ದೆಹಲಿ ತಂಡಕ್ಕೆ 8 ವಿಕೆಟ್‌ಗಳ ಜಯ

ಇ ಗುಂಪು: ಕೋಲ್ಕತ್ತ: ಸರ್ವಿಸಸ್: 50 ಓವರ್‌ಗಳಲ್ಲಿ 7ಕ್ಕೆ 301 (ಜಿ. ರಾಹುಲ್ ಸಿಂಗ್ 158, ದೇವೆಂದರ್ ಲೋಚಾಬ್ 64, ಪುಳಕಿತ್ ನಾರಂಗ್ ಔಟಾಗದೆ 43, ಜಯದೇವ್ ಉನದ್ಕತ್ 51ಕ್ಕೆ3) ಸೌರಾಷ್ಟ್ರ: 43.1 ಓವರ್‌ಗಳಲ್ಲಿ 233 (ಸ್ನೆಲ್ ಪಟೇಲ್ 43, ಅವಿ ಬರೋಟ್ 38, ಅರ್ಪಿತ್ ವಸವಾಡ 35, ಚಿರಾಗ್ ಜೈನ್ 68, ರಾಹುಲ್ ಸಿಂಗ್ 45ಕ್ಕೆ4, ವರುಣ್ ಚೌಧರಿ 62ಕ್ಕೆ3) ಫಲಿತಾಂಶ: ಸರ್ವಿಸಸ್ ಗೆ 68 ರನ್‌ಗಳ ಜಯ.

ಪ್ಲೇಟ್ ಗುಂಪು: ಚೆನ್ನೈ: ಅಸ್ಸಾಂ: 50 ಓವರ್‌ಗಳಲ್ಲಿ 8ಕ್ಕೆ342 (ಪಿ.ಪಿ. ದಾಸ್ 39, ದಿನೇಶ್ ದಾಸ್ 85, ಶಿವಶಂಕರ್ ರಾಯ್ 56, ಸಾಹಿಲ್ ಜೈನ್ 86, ಲಾಲ್‌ನುವಾಕಿಮ್ ವಾರ್ಟೆ 84ಕ್ಕೆ2, ಪಿ. ದೇಸಾಯಿ 63ಕ್ಕೆ3), ಮಿಜೋರಾಂ: 43.5 ಓವರ್‌ಗಳಲ್ಲಿ 160(ತರುವರ್ ಕೊಹ್ಲಿ 68, ಪ್ರತೀಕ್ ದೇಸಾಯಿ 22, ಕೆ.ಬಿ. ಪವನ್ 33, ಮುಕ್ತಾರ್ ಹುಸೇನ್ 20ಕ್ಕೆ4, ದಿನೇಶ್ ದಾಸ್ 18ಕ್ಕೆ3, ಗೋಕುಲ್ ಶರ್ಮಾ 21ಕ್ಕೆ3) ಫಲಿತಾಂಶ: ಅಸ್ಸಾಂಗೆ 162 ರನ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.