
ಪ್ರಜಾವಾಣಿ ವಾರ್ತೆ
ಬೆಂಗಳೂರು: ಈ ಬಾರಿ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಗೋವಾ ತಂಡವನ್ನು ಪ್ರತಿನಿಧಿಸುತ್ತಿರುವ ಬೆಂಗಳೂರಿನ ವಾಸುಕಿ ಕೌಶಿಕ್ ಅವರು ‘ವಿಕೆಟ್ ಶತಕ’ ದಾಖಲಿಸಿದರು.
ಮುಲ್ಲನಪುರದಲ್ಲಿ ನಡೆದ ಗೋವಾ ಮತ್ತು ಪಂಜಾಬ್ ಪಂದ್ಯದಲ್ಲಿ ಅವರು ಎರಡು ವಿಕೆಟ್ ಗಳಿಸಿದರು. ಅದರೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 100 ವಿಕೆಟ್ ಗಳಿಸಿದ ಬೌಲರ್ ಆದರು.
33 ವರ್ಷದ ಕೌಶಿಕ್ ಅವರು ಈ ವರ್ಷ ಗೋವಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಬಲಗೈ ಮಧ್ಯಮವೇಗಿ ಕೌಶಿಕ್ ಅವರು ಹೋದವಾರ ಶಿವಮೊಗ್ಗದಲ್ಲಿ ಕರ್ನಾಟಕ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 3 ವಿಕೆಟ್ ಗಳಿಸಿದ್ದರು.
ಮುಲ್ಲನಪುರದ ಪಂದ್ಯವು ಡ್ರಾ ಆಯಿತು. ಗೋವಾ ತಂಡವು ಮೊದಲ ಇನಿಂಗ್ಸ್ ಮುನ್ನಡೆಯಿಂದಾಗಿ 3 ಅಂಕ ಗಳಿಸಿತು. ಪಂಜಾಬ್ 1 ಅಂಕ ಪಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.