ADVERTISEMENT

ವೀಕ್ಷಕ ವಿವರಣೆಗಾರ ಕಿಶೋರ್ ನಿಧನ

ಪಿಟಿಐ
Published 15 ಅಕ್ಟೋಬರ್ 2020, 21:28 IST
Last Updated 15 ಅಕ್ಟೋಬರ್ 2020, 21:28 IST
ಕ್ರಿಕೆಟ್ ವೀಕ್ಷಕ ವಿವರಣೆಗಾರ ಕಿಶೋರ್ ಭಿಮಾನಿ
ಕ್ರಿಕೆಟ್ ವೀಕ್ಷಕ ವಿವರಣೆಗಾರ ಕಿಶೋರ್ ಭಿಮಾನಿ   

ಕೋಲ್ಕತ್ತ: ಹಿರಿಯ ಕ್ರೀಡಾ ಪತ್ರಕರ್ತ ಮತ್ತು ಕ್ರಿಕೆಟ್ ವೀಕ್ಷಕ ವಿವರಣೆಗಾರ ಕಿಶೋರ್ ಭಿಮಾನಿ (80) ಗುರುವಾರ ನಿಧನರಾದರು.

ಅವರಿಗೆ ಪತ್ನಿ ರಿಟಾ ಮತ್ತು ಟಿ.ವಿ. ತಾರೆಯಾಗಿರುವ ಮಗ ಗೌತಮ್ ಇದ್ದಾರೆ. ಕಿಶೋರ್ ಅವರಿಗೆ ಕೆಲವು ದಿನಗಳ ಹಿಂದೆ ಮಿದುಳಿನಲ್ಲಿ ಸಮಸ್ಯೆಯಾಗಿತ್ತು. ಅದಕ್ಕಾಗಿ ಚಿಕಿತ್ಸೆ ನೀಡಲಾಗುತ್ತಿತ್ತು’ ಎಂದು ಕುಟುಂಬದ ಮೂಲಗಳು ತಿಳಿಸಿವೆ.1980ರ ಸಂದರ್ಭದಲ್ಲಿ ತಮ್ಮ ಇಂಗ್ಲಿಷ್ ಕಾಮೆಂಟ್ರಿ’ಯಿಂದ ಜನಪ್ರಿಯರಾಗಿದ್ದರು. ‘ಅವರದ್ದು ಪ್ರಭಾವಯುತ ಬರವಣಿಗೆಯಾಗಿತ್ತು. ಕ್ರಿಕೆಟಿಗರು ಅವರ ಲೇಖನದ ಅಂಶಗಳನ್ನು ತಮ್ಮ ಆಟದಲ್ಲಿ ಅಳವಡಿಸಿಕೊಳ್ಳುವಂತೆ ಇರುತ್ತಿತ್ತು. ಅಮೋಘ ಕಾಮೆಂಟೆಟರ್ ಕೂಡ ಆಗಿದ್ದರು’ ಎಂದು ಬಿಷನ್ ಸಿಂಗ್ ಬೇಡಿ ನೆನಪಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT