ಕ್ರಿಕೆಟ್
ಸಿಲ್ಹೆಟ್ (ಬಾಂಗ್ಲಾದೇಶ): ಕುಶಲ್ ಮೆಂಡಿಸ್ ಅವರ ಅಮೋಘ ಆಟ (86, 55ಎ, 4x6, 6x6) ಮತ್ತು ವೇಗಿ ನುವಾನ್ ತುಷಾರ ಅವರ ‘ಹ್ಯಾಟ್ರಿಕ್’ ಸೇರಿ ಐದು ವಿಕೆಟ್ ಗೊಂಚಲಿನ ನೆರವಿನಿಂದ ಶ್ರೀಲಂಕಾ ತಂಡ, ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಶನಿವಾರ ಬಾಂಗ್ಲಾದೇಶ ತಂಡವನ್ನು 28 ರನ್‌ಗಳಿಂದ ಸೋಲಿಸಿತು.
ಸರಣಿ 2–1 ರಿಂದ ಶ್ರೀಲಂಕಾ ಪಾಲಾಯಿತು.
ಸ್ಕೋರುಗಳು: ಶ್ರೀಲಂಕಾ: 20 ಓವರುಗಳಲ್ಲಿ 7 ವಿಕೆಟ್‌ಗೆ 174 (ಕುಶಲ್ ಮೆಂಡಿಸ್ 86; ತಸ್ಕಿನ್ ಅಹ್ಮದ್ 25ಕ್ಕೆ2, ರಿಶದ್ ಹುಸೇನ್ 35ಕ್ಕೆ2); ಬಾಂಗ್ಲಾದೇಶ: 19.4 ಓವರುಗಳಲ್ಲಿ 146 (ರಿಶದ್ ಹುಸೇನ್ 53, ತಸ್ಕಿನ್ ಅಹ್ಮದ್ 31; ತುಷಾರ 20ಕ್ಕೆ5, ವನೀಂದು ಹಸರಂಗ 32ಕ್ಕೆ2).
ಸರಣಿಯಲ್ಲಿ ಮೊದಲ ಬಾರಿ ಆಡಿದ ತುಷಾರ, ಮೊದಲ ಓವರ್‌ನ ಎರಡು, ಮೂರು ಮತ್ತು ನಾಲ್ಕನೇ ಎಸೆತಗಳಲ್ಲಿ ಕ್ರಮವಾಗಿ ನಾಯಕ ನೈಜ್ಮುಲ್ ಹುಸೇನ್, ತೌಹಿಕ್ ಹೃದಯ್ ಮತ್ತು ಮಹಮದುಲ್ಲಾ ರಿಯಾದ್ ಅವರ ವಿಕೆಟ್‌ಗಳನ್ನು ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.