ಬೆಂಗಳೂರು: ಮಯಂಕ್ ಅಗರವಾಲ್ ಸಾರಥ್ಯದ ಕರ್ನಾಟಕ ತಂಡ, ಅಹಮದಾಬಾದಿನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆಯುವ ವಿಜಯ್ ಹಜಾರೆ ಟೂರ್ನಿಯ ‘ಸಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಪ್ರಬಲ ಮುಂಬೈ ತಂಡವನ್ನು ಎದುರಿಸಲಿದೆ.
ರಣಜಿ ಟ್ರೋಫಿಯಲ್ಲಿ ಪ್ರತಿಕೂಲ ಹವಾಮಾನದ ಕಾರಣ ಕರ್ನಾಟಕ ಕೆಲವು ಪಂದ್ಯಗಳಲ್ಲಿ ಅಮೂಲ್ಯ ಪಾಯಿಂಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ತಂಡದ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ.
ಮನೀಷ್ ಪಾಂಡೆ ಅವರಿಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುವ ತಂಡದಿಂದ ಕೊಕ್ ನೀಡಲಾಗಿದೆ. ಶ್ರೇಯಸ್ ಗೋಪಾಲ್ ಅವರಿಗೆ ಉಪನಾಯಕ ಸ್ಥಾನ ನೀಡಲಾಗಿದೆ. ಕಳಪೆ ಪ್ರದರ್ಶನ ನೀಡುವ ಇತರ ಹಿರಿಯ ಆಟಗಾರರ ಮೇಲೂ ಕಣ್ಣಿಡಲಾಗುವುದು ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಜೆ.ಅಭಿರಾಮ್ ಎಚ್ಚರಿಸಿದ್ದಾರೆ.
ಕರ್ನಾಟಕದ ಪಂದ್ಯಗಳು
ಡಿ. 21: ಮುಂಬೈ ವಿರುದ್ಧ
ಡಿ 23: ಪುದುಚೇರಿ ವಿರುದ್ಧ
ಡಿ. 26: ಪಂಜಾಬ್ ವಿರುದ್ಧ
ಡಿ. 28: ಅರುಣಾಚಲ ಪ್ರದೇಶ ವಿರುದ್ಧ
ಡಿ. 31: ಹೈದರಾಬಾದ್ ವಿರುದ್ಧ
ಜ. 3: ಸೌರಾಷ್ಟ್ರ ವಿರುದ್ಧ
ಜ. 5: ನಾಗಾಲ್ಯಾಂಡ್ ವಿರುದ್ಧ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.