
ಕ್ರಿಕೆಟ್ (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಸ್ಪಿನ್ನರ್ ಸಮರ್ಥ್ ಕುಲಕರ್ಣಿ (47ಕ್ಕೆ6) ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಕರ್ನಾಟಕ ತಂಡವು ವಿಜಯ್ ಮರ್ಚೆಂಟ್ ಟ್ರೋಫಿ (16 ವರ್ಷದೊಳಗಿನವರ) ಎಲೀಟ್ ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವನ್ನು 292 ರನ್‌ಗಳಿಗೆ ನಿಯಂತ್ರಿಸಿತು. ಬಳಿಕ, ಇನಿಂಗ್ಸ್ ಆರಂಭಿಸಿರುವ ರಾಜ್ಯ ತಂಡವು ಸೋಮವಾರದ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ಗೆ 243 ರನ್ ಗಳಿಸಿದೆ.
ರಾಯಪುರದ ಶಹೀದ್ ವೀರ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ಭಾನುವಾರ 6 ವಿಕೆಟ್‌ಗೆ 269 ರನ್ ಗಳಿಸಿದ್ದ ಮಧ್ಯಪ್ರದೇಶ ತಂಡವು ಸಮರ್ಥ್ ಅವರ ಬೌಲಿಂಗ್ ದಾಳಿಗೆ ಕುಸಿಯಿತು. ಎದುರಾಳಿ ತಂಡದ ಉಳಿದ ನಾಲ್ಕೂ ವಿಕೆಟ್‌ಗಳನ್ನು ಸಮರ್ಥ್ ಮೊದಲ ಅವಧಿಯಲ್ಲಿಯೇ ಉರುಳಿಸಿದ್ದರು.
ಆರ್. ರೋಹಿತ್ ರೆಡ್ಡಿ (71) ಹಾಗೂ ಆರ್ಯನ್‌ಸಿಂಗ್ ಚಾವ್ಡಾ (ಔಟಾಗದೇ 62) ಅವರ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡವು ಬ್ಯಾಟಿಂಗ್‌ನಲ್ಲಿಯೂ ಸ್ಥಿರ ಪ್ರದರ್ಶನ ತೋರಿದೆ. ಇನಿಂಗ್ಸ್ ಚುಕ್ತಾಕ್ಕೆ ಇನ್ನು 49 ರನ್ ಬೇಕಿದೆ.
ಸಂಕ್ಷಿಪ್ತ ಸ್ಕೋರು: ಮಧ್ಯಪ್ರದೇಶ: 292 (ಅಥರ್ವ್ ಪಟೇಲ್ 70, ರಿತೀಕ್ ಪಾರಬ್ ಔಟಾಗದೇ 37; ಸಮರ್ಥ್ ಕುಲಕರ್ಣಿ 47ಕ್ಕೆ6). ಕರ್ನಾಟಕ: 5 ವಿಕೆಟ್‌ಗೆ 243 (ಆರ್. ರೋಹಿತ್ ರೆಡ್ಡಿ 71, ಆರ್ಯನ್‌ಸಿಂಗ್ ಚಾವ್ಡಾ ಔಟಾಗದೇ 62, ಸುಕೃತ್ ಜೆ. 49; ನೈತಿಕ್ ಜೈನ್ 70ಕ್ಕೆ3).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.