ADVERTISEMENT

ಕುಸ್ತಿ: ವಿನೇಶಾ ಪೋಗಟ್‌ಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 16:38 IST
Last Updated 28 ಫೆಬ್ರುವರಿ 2021, 16:38 IST
ವಿನೇಶಾ ಪೋಗಟ್
ವಿನೇಶಾ ಪೋಗಟ್   

ಕೀವ್, ಉಕ್ರೇನ್(ಪಿಟಿಐ): ಭಾರತದ ವಿನೇಶಾ ಪೋಗಟ್ ಅವರು ಭಾನುವಾರ ಉಕ್ರೇನಿನ ಶ್ರೇಷ್ಠ ಕೋಚ್‌ಗಳು ಮತ್ತು ಕುಸ್ತಿಪಟುಗಳ ಸಾಧನೆ ಸ್ಮರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಅಂತರರಾಷ್ಟ್ರೀಯ ಕುಸ್ತಿಯಲ್ಲಿ ಚಿನ್ನ ಗೆದ್ದರು.

ಮಹಿಳೆಯರ 53 ಕೆ.ಜಿ. ವಿಭಾಗದಲ್ಲಿ ವಿನೇಶಾ ಅವರು ಬೆಲಾರೂಸ್‌ನ ವಿ. ಕಲಾಜಿನಾಸ್ಕಿ ಅವರನ್ನು ಮಣಿಸಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಬೆಲಾರೂಸ್‌ ಕುಸ್ತಿಪಟು ಏಳನೇ ಸ್ಥಾನದಲ್ಲಿದ್ದಾರೆ. ಅವರು 2017ರ ವಿಶ್ವ ಚಾಂಪಿಯನ್ ಕೂಡ ಆಗಿದ್ದರು.

ಹರಿಯಣದ ವಿನೇಶಾ ಮತ್ತು ಕಲಾಜಿನಾಸ್ಕಿ ನಡುವಣ ಜಿದ್ದಾಜಿದ್ದಿನ ಪೈಪೋಟಿ ನಡೆಯಿತು. 10–8ರ ಅಂತರದಲ್ಲಿ ವಿನೇಶಾ ಗೆದ್ದರು.

ADVERTISEMENT

ಹೋದ ವರ್ಷ ಕೊರೊನಾ ವೈರಸ್‌ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಯಾವುದೇ ಕುಸ್ತಿ ಸ್ಪರ್ಧೆಗಳು ನಡೆದಿರಲಿಲ್ಲ. ಈ ವರ್ಷದ ಮೊದಲ ಸ್ಪರ್ಧೆಯಲ್ಲಿ ವಿನೇಶಾ ಚಿನ್ನದ ಆರಂಭ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.