ADVERTISEMENT

ODI ಕ್ರಿಕೆಟ್‌ನಲ್ಲಿ 14ಸಾವಿರ ರನ್: ಸಚಿನ್ ದಾಖಲೆ ಮುರಿದು ಚರಿತ್ರೆ ಬರೆದ ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಫೆಬ್ರುವರಿ 2025, 14:43 IST
Last Updated 23 ಫೆಬ್ರುವರಿ 2025, 14:43 IST
<div class="paragraphs"><p>ವಿರಾಟ್ ಕೊಹ್ಲಿ</p></div>

ವಿರಾಟ್ ಕೊಹ್ಲಿ

   

ಬೆಂಗಳೂರು: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 15 ರನ್‌ಗಳಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 14 ಸಾವಿರ ರನ್‌ ಪೂರೈಸಿದ ವಿಶ್ವ ದಾಖಲೆ ಬರೆದರು.

ಏಕದಿನ ಕ್ರಿಕೆಟ್‌ನಲ್ಲಿ 299 ಪಂದ್ಯ ಆಡಿದ ಕೊಹ್ಲಿ 14 ಸಾವಿರ ರನ್‌ಗಳನ್ನು ವೇಗವಾಗಿ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ADVERTISEMENT

ಏಕದಿನ ಕ್ರಿಕೆಟ್‌ನಲ್ಲಿ 14 ಸಾವಿರ ರನ್‌ಗಳನ್ನು ಇಬ್ಬರು ಆಟಗಾರರು ಮಾತ್ರ ಹೊಡೆದಿದ್ದಾರೆ. ಇವರಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ಶ್ರೀಲಂಕಾ ಆಟಗಾರ ಕುಮಾರ್ ಸಂಗಕ್ಕಾರ. ಇದೀಗ ಈ ಎಲೈಟ್‌ ಲೀಸ್ಟ್‌ಗೆ ವಿರಾಟ್‌ ಕೊಹ್ಲಿ ಸೇರಿಕೊಂಡಿದ್ದಾರೆ.

ವಿರಾಟ್ ಸಾಧನೆ: ಕೊಹ್ಲಿ 299 ಏಕದಿನ ಪಂದ್ಯಗಳ 286ನೇ ಇನಿಂಗ್ಸ್‌ನಲ್ಲಿ 57.78ರ ಸರಾಸರಿಯಲ್ಲಿ 14000 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 50 ಶತಕ ಹಾಗೂ 73 ಅರ್ಧಶತಕಗಳು ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.