ADVERTISEMENT

ಅನುಷ್ಕಾ ಮೊದಲ ಭೇಟಿಯ ಅನುಭವ ಹಂಚಿಕೊಂಡ ವಿರಾಟ್‌ 

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 10:33 IST
Last Updated 5 ಆಗಸ್ಟ್ 2021, 10:33 IST
ಅನುಷ್ಕಾ, ವಿರಾಟ್‌
ಅನುಷ್ಕಾ, ವಿರಾಟ್‌   

ಅನುಷ್ಕಾ ಶರ್ಮಾ ಅವರೊಂದಿಗಿನ ಮೊದಲ ಭೇಟಿಯ ಅನುಭವವನ್ನುಕ್ರಿಕೆಟಿಗ ವಿರಾಟ್ ಕೊಹ್ಲಿ ಹಂಚಿಕೊಂಡಿದ್ದಾರೆ.

ಅನುಷ್ಕಾ ಮತ್ತು ಕೊಹ್ಲಿ ನಡುವಿನ ಭೇಟಿಯ ಬಗ್ಗೆ ಕ್ರಿಕೆಟಿಗ ದಿನೇಶ್‌ ಕಾರ್ತಿಕ್‌ ಕೇಳಿದ ಪ್ರಶ್ನೆಗೆ ಕೊಹ್ಲಿ ಉತ್ತರಿಸಿದ್ದಾರೆ.

ನಾನು ಅನುಷ್ಕಾರನ್ನು ಮೊದಲು ಭೇಟಿ ಮಾಡಿದ್ದು 2013ರಲ್ಲಿ. ನಾವು ಒಟ್ಟಿಗೆ ಶ್ಯಾಂಪು ಜಾಹೀರಾತಿನಲ್ಲಿ ನಟಿಸುವ ಸಂದರ್ಭ ಅದಾಗಿತ್ತು. ಅವರನ್ನು ನೋಡಿದಾಗ ನಾನು ಕೂಡ ನರ್ವಸ್‌ ಆಗಿದ್ದೆ. ಸೆಟ್‌ನಲ್ಲಿ ಏನು ಮಾಡಬೇಕು ಎಂದು ಗೊತ್ತಾಗದೇ ಅವರ ಮೇಲೆ ಜೋಕ್‌ ಮಾಡುತ್ತಿದೆ. ಇದು ಅನುಷ್ಕಾಗೂ ಇಷ್ಟವಾಗಿತ್ತು ಎಂದು ಕೊಹ್ಲಿ ತಮ್ಮ ಮೊದಲ ಭೇಟಿಯ ಅನುಭವವನ್ನು ಹಂಚಿಕೊಂಡಿದ್ದಾರೆ.

ADVERTISEMENT

ಮೂರು ವರ್ಷ ಡೇಟಿಂಗ್‌ ಮಾಡಿದ ವಿರುಷ್ಕಾ ಜೋಡಿ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಈ ಜೋಡಿಗೆ ವಮಿಕಾ ಎಂಬ ಹೆಣ್ಣು ಮಗು ಇದೆ. ಅನುಷ್ಕಾ ಜತೆ ಸಂತೃಪ್ತಿಯ ಜೀವನ ನಡೆಸುತ್ತಿರುವೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ತಂದೆಯ ನಿಧನ ಬೇಸರ ತರಿಸಿದೆ ಅವರು ಹೇಳಿದ್ದಾರೆ. ನನ್ನ ಕ್ರಿಕೆಟ್‌ ಆಟವನ್ನು ನೋಡಲು ಅಪ್ಪ ಇಲ್ಲ, ನನ್ನ ಮಗಳನ್ನು ನೋಡಲು ಅವರಿಲ್ಲ ಎಂದು ಕೊಹ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.