ADVERTISEMENT

ಕೊನೆಯ ಓವರ್‌ನಲ್ಲಿ 24 ರನ್ ಗಳಿಸಿದ ಬ್ರೂಕ್; ಇಂಗ್ಲೆಂಡ್‌ಗೆ ಜಯ, ಸರಣಿ ಜೀವಂತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಡಿಸೆಂಬರ್ 2023, 5:08 IST
Last Updated 17 ಡಿಸೆಂಬರ್ 2023, 5:08 IST
<div class="paragraphs"><p>(ಚಿತ್ರ ಕೃಪೆ: X/@englandcricket)</p></div>

(ಚಿತ್ರ ಕೃಪೆ: X/@englandcricket)

   

ಸೇಟ್ ಜಾರ್ಜ್ (ಗ್ರೆನೆಡಾ): ವೆಸ್ಟ್‌ಇಂಡೀಸ್ ವಿರುದ್ಧ ಇಂಗ್ಲೆಂಡ್ ಗೆಲುವಿಗೆ ಕೊನೆಯ ಓವರ್‌ನಲ್ಲಿ 21 ರನ್ನಿನ ಅವಶ್ಯಕತೆಯಿತ್ತು. ಕ್ರೀಸಿನಲ್ಲಿದ್ದ ಹ್ಯಾರಿ ಬ್ರೂಕ್, ಕೇವಲ ಐದು ಎಸೆತಗಳಲ್ಲೇ ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿ ಸೇರಿದಂತೆ 24 ರನ್ ಗಳಿಸಿ ಆಂಗ್ಲರ ಪಡೆಗೆ ರೋಚಕ ಗೆಲುವು ಒದಗಿಸಿಕೊಟ್ಟರು.

ಆ ಮೂಲಕ ಮೂರನೇ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಇಂಗ್ಲೆಂಡ್ ಏಳು ವಿಕೆಟ್ ಅಂತರದ ಜಯ ಗಳಿಸಿತು. ಐದು ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಪರಾಭವಗೊಂಡಿದ್ದ ಇಂಗ್ಲೆಂಡ್ ಈ ಪಂದ್ಯವನ್ನು ಗೆದ್ದು ಸರಣಿ ಜೀವಂತವಾಗಿರಿಸಿದೆ.

ADVERTISEMENT

ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್, ಆರು ವಿಕೆಟ್ ನಷ್ಟಕ್ಕೆ 222 ರನ್ ಪೇರಿಸಿತು. ನಿಕೋಲಸ್ ಪೂರನ್ ಗರಿಷ್ಠ 82 ರನ್ ಗಳಿಸಿದರು. ನಾಯಕ ರೋವ್ಮನ್ ಪೊವೆಲ್ 39 ರನ್ ಗಳಿಸಿದರು.

ಫಿಲಿಪ್ ಸಾಲ್ಟ್ ಶತಕ...ಬ್ರೂಕ್ ಫಿನಿಷರ್...

ಇಂಗ್ಲೆಂಡ್ ಪರ ಶತಕ ಗಳಿಸಿದ ಆರಂಭಿಕ ಬ್ಯಾಟರ್ ಫಿಲಿಪ್ ಸಾಲ್ಟ್ ಗೆಲುವಿನ ರೂವಾರಿ ಎನಿಸಿದರು. 56 ಎಸೆತಗಳಲ್ಲಿ ಒಂಬತ್ತು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ನೆರವಿನಿಂದ 109 ರನ್ ಗಳಿಸಿ ಅಜೇಯರಾಗುಳಿದರು. ಅಲ್ಲದೆ ನಾಯಕ ಜೋ ಬಟ್ಲರ್ (51) ಜೊತೆ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟದಲ್ಲಿ ಭಾಗಿಯಾದರು.

ಕೊನೆಯ ಹಂತದಲ್ಲಿ ಕೇವಲ 7 ಎಸೆತಗಳಲ್ಲಿ 31 ರನ್ ಗಳಿಸಿದ (4 ಸಿಕ್ಸರ್ ಹಾಗೂ 1 ಬೌಂಡರಿ) ಹ್ಯಾರಿ ಬ್ರೂಕ್ ಸಹ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಪರಿಣಾಮ ಇನ್ನೊಂದು ಎಸೆತ ಬಾಕಿ ಉಳಿದಿರುವಂತೆಯೇ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.