ಡನೆಡಿನ್: ಶೆಮೈನ್ ಕ್ಯಾಂಪ್ಬೆಲ್ ಸುಂದರ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಜಯಿಸಿತು.
ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕ್ಯಾಂಪ್ಬೆಲ್ (66; 80ಎ, 4X4) ಮತ್ತು ಚೆಡಿಯನ್ ನೇಸನ್ (ಔಟಾಗದೆ 49; 74ಎ, 4X3) ಅವ ಬ್ಯಾಟಿಂಗ್ 50 ಓವರ್ಗಳಲ್ಲಿ 6ಕ್ಕೆ 225 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು 47.4 ಓವರ್ಗಳಲ್ಲಿ 218 ರನ್ ಗಳಿಸಿ ಆಲೌಟ್ ಆಯಿತು.
ಸಂಕ್ಷಿಪ್ತ ಸ್ಕೋರು; ವೆಸ್ಟ್ ಇಂಡೀಸ್: 50 ಓವರ್ಗಳಲ್ಲಿ 6ಕ್ಕೆ225 (ದಿಯೇಂದ್ರ ಡಾಟಿನ್ 31, ಹೆಯಲಿ ಮ್ಯಾಥ್ಯೂಸ್ 45, ಶೆಮೈನ್ ಕ್ಯಾಂಪ್ಬೆಲ್ 66, ಚೆದಿಯನ್ ನೇಷನ್ ಔಟಾಗದೆ 49, ಸೋಫಿ ಎಕ್ಸೆಲ್ಸ್ಟೋನ್ 20ಕ್ಕೆ3, ನಥಾಲಿಯಾ ಸೀವರ್ 49ಕ್ಕೆ1) ಇಂಗ್ಲೆಂಡ್: 47.4 ಓವರ್ಗಳಲ್ಲಿ 218 (ಟಾಮಿ ಬೆಮೌಂಟ್ 46, ಡ್ಯಾನ್ ವೈಟ್ 33, ಸೋಫಿಯಾ ಡಂಕ್ಲೆ 38, ಸೋಫಿ ಎಕ್ಸೆಲ್ಸ್ಟೋನ್ 33, ಕೇಟ್ ಕ್ರಾಸ್ 27, ಶಮಿಲಿಯಾ ಕಾನೆಲ್ 38ಕ್ಕೆ3, ಹೆಯಲಿ ಮ್ಯಾಥ್ಯೂಸ್ 40ಕ್ಕೆ2, ಅನಿಸಾ ಮೊಹಮ್ಮದ್ 24ಕ್ಕೆ2) ಫಲಿತಾಂಶ: ವೆಸ್ಟ್ ಇಂಡೀಸ್ ತಂಡಕ್ಕೆ 7 ರನ್ಗಳ ಜಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.