ADVERTISEMENT

Pakistan VS New Zealand| ಕೇನ್ ಶತಕದ ಸೊಬಗು

ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ: ಮುನ್ನಡೆಯ ಸನಿಹ ನ್ಯೂಜಿಲೆಂಡ್‌

ಏಜೆನ್ಸೀಸ್
Published 4 ಜನವರಿ 2021, 13:20 IST
Last Updated 4 ಜನವರಿ 2021, 13:20 IST
ಕೇನ್‌ ವಿಲಿಯಮ್ಸನ್‌ ಶತಕ ಸಂಭ್ರಮ– ಎಎಫ್‌ಪಿ ಚಿತ್ರ
ಕೇನ್‌ ವಿಲಿಯಮ್ಸನ್‌ ಶತಕ ಸಂಭ್ರಮ– ಎಎಫ್‌ಪಿ ಚಿತ್ರ   

ಕ್ರೈಸ್ಟ್‌ಚರ್ಚ್‌: ನಾಯಕ ಕೇನ್‌ ವಿಲಿಯಮ್ಸನ್‌ ಸತತ ಮೂರನೇ ಶತಕದ (ಬ್ಯಾಟಿಂಗ್‌ 112, 175 ಎಸೆತ, 16 ಬೌಂಡರಿ) ಸಿಹಿ ಸವಿದರು. ಅವರ ಅಮೋಘ ಆಟದ ನೆರವಿನಿಂದ ನ್ಯೂಜಿಲೆಂಡ್‌ ತಂಡವು ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆಯ ಸನಿಹದಲ್ಲಿದೆ.

ಪಾಕಿಸ್ತಾನದ ಮೊದಲ ಇನಿಂಗ್ಸ್ ಮೊತ್ತ 297 ರನ್‌ಗಳಿಗೆ ಉತ್ತರವಾಗಿ ಬ್ಯಾಟ್‌ ಮಾಡಿದ ಕೇನ್ ಬಳಗ ಸೋಮವಾರ ಎರಡನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ಗೆ 286 ರನ್‌ ಗಳಿಸಿತ್ತು.

ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭರ್ಜರಿ ದ್ವಿಶತಕ (251) ಬಾರಿಸಿದ್ದ ಕೇನ್‌, ಬಳಿಕ ಪಾಕ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 129 ರನ್‌ ಕಲೆ ಹಾಕಿದ್ದರು.

ADVERTISEMENT

ಟಾಮ್‌ ಲೇಥಮ್ (33) ಹಾಗೂ ಟಾಮ್ ಬ್ಲಂಡೆಲ್‌ (16) ಮೊದಲ ವಿಕೆಟ್‌ ಜೊತೆಯಾಟದಲ್ಲಿ 52 ರನ್ ಸೇರಿಸಿದರು. ರಾಸ್‌ ಟೇಲರ್ (12) ವಿಫಲರಾದರು. ಈ ಹಂತದಲ್ಲಿ ಜೊತೆಗೂಡಿದ ವಿಲಿಯಮ್ಸನ್‌ ಹಾಗೂ ಹೆನ್ರಿ ನಿಕೋಲ್ಸ್ (ಬ್ಯಾಟಿಂಗ್‌ 89) ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 215 ರನ್‌ ಕಲೆಹಾಕಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್: ಪಾಕಿಸ್ತಾನ: 83.5 ಓವರ್‌ಗಳಲ್ಲಿ 297 ಆಲೌಟ್‌: ನ್ಯೂಜಿಲೆಂಡ್‌: 85 ಓವರ್‌ಗಳಲ್ಲಿ 3 ವಿಕೆಟ್‌ಗೆ 286 (ಕೇನ್‌ ವಿಲಿಯಮ್ಸನ್‌ ಬ್ಯಾಟಿಂಗ್‌ 112, ಹೆನ್ರಿ ನಿಕೋಲ್ಸ್ ಬ್ಯಾಟಿಂಗ್‌ 89, ಟಾಮ್ ಲೇಥಮ್‌ 33; ಮೊಹಮ್ಮದ್ ಅಬ್ಬಾಸ್‌ 37ಕ್ಕೆ 1, ಶಾಹೀನ್ ಶಾ ಆಫ್ರಿದಿ 45ಕ್ಕೆ 1, ಫಹೀಂ ಅಶ್ರಫ್‌ 55ಕ್ಕೆ 1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.