ADVERTISEMENT

ನಿಧಾನಗತಿ ಬೌಲಿಂಗ್‌: ಹೋಲ್ಡರ್‌ ಮೇಲೆ ನಿಷೇಧ

ಏಜೆನ್ಸೀಸ್
Published 4 ಫೆಬ್ರುವರಿ 2019, 17:01 IST
Last Updated 4 ಫೆಬ್ರುವರಿ 2019, 17:01 IST
   

ದುಬೈ: ತಂಡ ನಿಗದಿತ ಅವಧಿಯಲ್ಲಿ ಬೌಲಿಂಗ್‌ ಪೂರ್ತಿ ಮಾಡದ ಕಾರಣದಿಂದ ವೆಸ್ಟ್‌ ಇಂಡೀಸ್‌ ನಾಯಕ ಜೇಸನ್‌ ಹೋಲ್ಡರ್‌ ಇಂಗ್ಲೆಂಡ್‌ ಎದುರಿನ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಆಡುವುದರಿಂದ ನಿಷೇಧಿಸಲಾಗಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಸೋಮವಾರ ಈ ವಿಷಯ ತಿಳಿಸಿದೆ. ಕಳೆದ ವಾರ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಗೆದ್ದಿತ್ತು. ಕಳೆದ ತಿಂಗಳು ನಡೆದ್ದಿ ಶ್ರೀಲಂಕಾ ಎದುರಿನ ಟೆಸ್ಟ್ ಪಂದ್ಯದಲ್ಲೂ ವೆಸ್ಟ್ ಇಂಡೀಸ್‌ ನಿಧಾನಗತಿಯ ಮಾಡಿದ ಕಾರಣ ಹೋಲ್ಡರ್ ‘ಶಿಕ್ಷೆ’ಗೆ ಒಳಗಾಗಿದ್ದರು.

ಮೂರನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಇದೇ ಒಂಬತ್ತರಂದು ಗ್ರಾಸ್ ಐಲೆಟ್‌ನಲ್ಲಿ ಆರಂಭವಾಗಲಿದ್ದು ವೆಸ್ಟ್ ಇಂಡೀಸ್ ತಂಡ ಆತಿಥೇಯರನ್ನು ವೈಟ್ ವಾಷ್ ಮಾಡುವ ಕಾತರದಲ್ಲಿದೆ. ಮೊದಲ ಪಂದ್ಯದಲ್ಲಿ 381 ರನ್‌ಗಳಿಂದ ಗೆದ್ದಿದ್ದ ಕೆರಿಬಿಯನ್ ನಾಡಿನ ತಂಡ ಎರಡನೇ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಜಯಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.