ADVERTISEMENT

ಮಹಿಳಾ ಕ್ರಿಕೆಟ್‌: ಕರ್ನಾಟಕಕ್ಕೆ ಮಣಿದ ದೆಹಲಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 15:22 IST
Last Updated 13 ಮಾರ್ಚ್ 2021, 15:22 IST
ಕ್ರಿಕೆಟ್
ಕ್ರಿಕೆಟ್   

ಬೆಂಗಳೂರು: ಸವಾಲಿನ ಮೊತ್ತವನ್ನು ದಿಟ್ಟವಾಗಿ ಬೆನ್ನಟ್ಟಿದ ಕರ್ನಾಟಕ ಮಹಿಳಾ ತಂಡದವರು ಬಿಸಿಸಿಐ ಮಹಿಳಾ ಏಕದಿನ ಕ್ರಿಕೆಟ್ ಟ್ರೋಫಿಯ ಪಂದ್ಯದಲ್ಲಿ ದೆಹಲಿ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಮಣಿಸಿದರು.

ಚೆನ್ನೈನ ಟಿ.ಐ.ಮುರುಗಪ್ಪ ಮೈದಾನದಲ್ಲಿ ಶನಿವಾರ ನಡೆದ ಹಣಾಹಣಿಯಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ದೆಹಲಿ ತಂಡ ಶ್ವೇತಾ ಶೆರಾವತ್ (57; 98 ಎಸೆತ, 10 ಬೌಂಡರಿ) ಅವರ ಅರ್ಧಶತಕದ ನೆರವಿನಿಂದ 184 ರನ್ ಕಲೆ ಹಾಕಿತು. ಕರ್ನಾಟಕ 47.3 ಓವರ್‌ಗಳಲ್ಲಿ ಗುರಿ ಮುಟ್ಟಿತು.

ದಿವ್ಯಾ ಜಿ (40; 56 ಎ, 7 ಬೌಂ) ಮತ್ತು ರಕ್ಷಿತಾ (ಔಟಾಗದೆ 35; 74 ಎ, 3 ಬೌಂ) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ADVERTISEMENT

ಸಂಕ್ಷಿಪ್ತ ಸ್ಕೋರು
ದೆಹಲಿ:
50 ಓವರ್‌ಗಳಲ್ಲಿ 184 (ಶ್ವೇತಾ ಶೆರಾವತ್ 57, ವಂದನಾ ಚತುರ್ವೇದಿ 35, ನೇಹಾ ಚಿಲ್ಲಾರ್ ಔಟಾಗದೆ 22; ಸಹನಾ ಪವಾರ್ 29ಕ್ಕೆ2, ಚಂದು ವಿ 23ಕ್ಕೆ3)
ಕರ್ನಾಟಕ: 47.3 ಓವರ್‌ಗಳಲ್ಲಿ 6ಕ್ಕೆ 186 (ಶುಭಾ ಎಸ್‌ 36, ದಿವ್ಯಾ ಜಿ 40, ರಕ್ಷಿತಾ ಔಟಾಗದೆ 35, ನಿಕ್ಕಿ ಪ್ರಸಾದ್ 25; ಲಲಿತಾ ಶರ್ಮಾ 25ಕ್ಕೆ3).
ಫಲಿತಾಂಶ: ಕರ್ನಾಟಕ ತಂಡಕ್ಕೆ 4 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.