ಮಹಿಳಾ ಕ್ರಿಕೆಟ್ ವೀಕ್ಷಕರು
ಬೆಂಗಳೂರು: ಮೈಸೂರು ವಾರಿಯರ್ಸ್ ತಂಡ ಮಹಾರಾಣಿ ಕಪ್ ಮಹಿಳಾ ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಗುರುವಾರ ಮಂಗಳೂರು ಡ್ರ್ಯಾಗನ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು. ಬುಧವಾರ ರಾತ್ರಿ ಮತ್ತು ಬೆಳಗಿನ ಜಾವ ಮಳೆಯಾದ ಕಾರಣ ಕ್ರೀಡಾಂಗಣ ತೇವಗೊಂಡಿದ್ದು, ಪಂದ್ಯ ತಡವಾಗಿ ಆರಂಭವಾಯಿತು.
ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಈ ಪಂದ್ಯವನ್ನು ತಲಾ 11 ಓವರುಗಳಿಗೆ ಇಳಿಸಲಾಯಿತು.
ಮೊಲದು ಆಡಿದ ಮಂಗಳೂರು ತಂಡ 11 ಓವರುಗಳಲ್ಲಿ 5 ವಿಕೆಟ್‌ಗೆ 97 ರನ್ ಹೊಡೆಯಿತು. ಇಂಚರಾ ಸಿ.ಯು ಅಜೇಯ 37 ರನ್ ಗಳಿಸಿದರು. ಮೈಸೂರು ತಂಡ ಮೂರು ಎಸೆತಗಳು ಉಳಿದಿರುವಂತೆ 2 ವಿಕೆಟ್‌ಗೆ 98 ರನ್ ಬಾರಿಸಿತು. ಶುಭಾ ಸತೀಶ್ 32 ಎಸೆತಗಳಲ್ಲಿ 1 ಸಿಕ್ಸರ್, ಏಳು ಬೌಂಡರಿಗಳಿದ್ದ 47 ರನ್ ಗಳಿಸಿದರೆ, ರಚಿತಾ ಹತ್ವಾರ್ ಔಟಾಗದೇ 39 ರನ್ ಗಳಿಸಿ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಬೆಳಿಗ್ಗೆ ನಿಗದಿಯಾಗಿದ್ದ ಹುಬ್ಬಳ್ಳಿ ಟೈಗರ್ಸ್ ಮತ್ತು ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ನಡುವಣ ಪಂದ್ಯವನ್ನು ಹೊರಾಂಗಣ ತೇವವಾಗಿದ್ದ ಕಾರಣ ರದ್ದುಗೊಳಿಸಲಾಯಿತು.
ಸಂಕ್ಷಿಪ್ತ ಸ್ಕೋರು: ಮಂಗಳೂರು ಡ್ರ್ಯಾಗನ್ಸ್: 11 ಓವರುಗಳಲ್ಲಿ 5 ವಿಕೆಟ್‌ಗೆ 97 (ಪ್ರೇರಣಾ ಜಿ.ಆರ್. 29, ಇಂಚರಾ ಸಿ.ಯು ಔಟಾಗದೇ 37; ಅಹ್ಲಾಮ್ ಎಫ್.ಸೈಯದ್ 17ಕ್ಕೆ2, ಸಹನಾ ಎಸ್.ಪವಾರ್ 20ಕ್ಕೆ2); ಮೈಸೂರು ವಾರಿಯರ್ಸ್: 10.3 ಓವರುಗಳಲ್ಲಿ 2 ವಿಕೆಟ್‌ಗೆ 98 (ಶುಭಾ ಸತೀಶ್ 47, ರಚಿತಾ ಹತ್ವಾರ್ ಔಟಾಗದೇ 39).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.