ADVERTISEMENT

ದಿವ್ಯಾ ಶತಕ: ಕರ್ನಾಟಕಕ್ಕೆ ಜಯ

ಮಹಿಳೆಯರ ಏಕದಿನ ಕ್ರಿಕೆಟ್‌: ವಿದರ್ಭಗೆ ಸೋಲು

​ಪ್ರಜಾವಾಣಿ ವಾರ್ತೆ
Published 4 ಜನವರಿ 2024, 23:50 IST
Last Updated 4 ಜನವರಿ 2024, 23:50 IST
ದಿವ್ಯಾ ಜ್ಞಾನಾನಂದ
ದಿವ್ಯಾ ಜ್ಞಾನಾನಂದ   

ಭುವನೇಶ್ವರ: ದಿವ್ಯಾ ಜ್ಞಾನಾನಂದ ಅವರ ಅಜೇಯ ಶತಕದ ನೆರವಿನಿಂದ ಕರ್ನಾಟಕ ತಂಡವು ಬಿಸಿಸಿಐ ಸೀನಿಯರ್‌ ಮಹಿಳೆಯರ ಏಕದಿನ ಕ್ರಿಕೆಟ್‌ ಟ್ರೋಫಿ ಟೂರ್ನಿಯಲ್ಲಿ 89 ರನ್‌ಗಳಿಂದ ವಿದರ್ಭ ತಂಡವನ್ನು ಮಣಿಸಿತು.

ಭುವನೇಶ್ವರದ ಕೆಐಐಟಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡವು ದಿವ್ಯಾ (ಔಟಾಗದೆ 137; 137ಎ, 4X15, 6X6) ಅವರ ಬ್ಯಾಟಿಂಗ್‌ ಬಲದಿಂದ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 250 ರನ್‌ ಗಳಿಸಿತು. ರೋಷನಿ ಕಿರಣ್ (38), ಪುಷ್ಪಾ ಕಿರೇಸೂರು (35) ಉಪಯುಕ್ತ ಕಾಣಿಕೆ ನೀಡಿದರು.

ಗುರಿಯನ್ನು ಬೆನ್ನಟ್ಟಿದ ವಿದರ್ಭದ ಬ್ಯಾಟರ್‌ಗಳು ಕರ್ನಾಟಕದ ಬೌಲರ್‌ಗಳ ದಾಳಿಯೆದುರು ತತ್ತರಿಸಿದರು. ಹೀಗಾಗಿ, 41.4 ಓವರ್‌ಗಳಲ್ಲಿ 161 ರನ್‌ಗೆ ತಂಡವು ಕುಸಿಯಿತು. ಎಲ್‌.ಎಂ. ಇನಾಮದಾರ (61;80ಎ, 4X8) ಮತ್ತು ಡಿ.ಡಿ. ಕಸತ್ (45) ಹೊರತುಪಡಿಸಿ ಉಳಿದವರು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಬೌಲಿಂಗ್‌ನಲ್ಲೂ ಮಿಂಚಿದ ಪುಷ್ಪಾ 25 ರನ್‌ಗೆ ಮೂರು ವಿಕೆಟ್‌ ಗಳಿಸಿದರು. ಸಹನಾ ಎಸ್‌. ಪವಾರ್‌ ಮತ್ತು ರೋಹಿತಾ ಚೌಧರಿ ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್‌ ಪಡೆದರು.

ADVERTISEMENT

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 250 (ರೋಷನಿ ಕಿರಣ್‌ 38, ವೃಂದಾ ದಿನೇಶ್‌ 23, ದಿವ್ಯಾ ಜ್ಞಾನಾನಂದ ಔಟಾಗದೆ 137, ಪುಷ್ಪಾ ಕಿರೇಸೂರು 35). ವಿದರ್ಭ: 41.4 ಓವರ್‌ಗಳಲ್ಲಿ 161 (ಡಿ.ಡಿ. ಕಸತ್‌ 45, ಎಲ್‌.ಎಂ. ಇನಾಮದಾರ 61; ಪುಷ್ಪಾ ಕಿರೇಸೂರು 25ಕ್ಕೆ 3, ರೋಹಿತಾ ಚೌಧರಿ 28ಕ್ಕೆ 2, ಸಹನಾ ಎಸ್‌. ಪವಾರ್‌ 30ಕ್ಕೆ 3)

ಫಲಿತಾಂಶ: ಕರ್ನಾಟಕಕ್ಕೆ 89 ರನ್‌ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.