ADVERTISEMENT

‘ಟಿ20 ವಿಶ್ವಕಪ್‌ ಗೆದ್ದರೆ ಮಹಿಳಾ ಐಪಿಎಲ್‌ ವಿಚಾರ ಮುನ್ನೆಲೆಗೆ’

ಹಿರಿಯ ಕ್ರಿಕೆಟ್‌ ಆಟಗಾರ್ತಿ ಅಂಜುಮ್ ಚೋಪ್ರಾ ಅಭಿಪ್ರಾಯ

ಪಿಟಿಐ
Published 26 ಏಪ್ರಿಲ್ 2020, 21:19 IST
Last Updated 26 ಏಪ್ರಿಲ್ 2020, 21:19 IST
ಅಂಜುಮ್‌ ಚೋಪ್ರಾ (ಎಡ).
ಅಂಜುಮ್‌ ಚೋಪ್ರಾ (ಎಡ).   

ನವದೆಹಲಿ: ಪೂರ್ಣ ಪ್ರಮಾಣದ ಮಹಿಳಾ ಐಪಿಎಲ್‌ ಟೂರ್ನಿಯ ವಿಚಾರ ಬೆಳವಣಿಗೆಯ ಹಂತದಲ್ಲಿದೆ. ಒಂದು ವೇಳೆ ಭಾರತ ಮಹಿಳಾ ತಂಡ ಐಸಿಸಿ ಟ್ವೆಂಟಿ–20 ವಿಶ್ವಕಪ್‌ ಜಯಿಸಿದರೆ ಈ ಕನಸು ಶೀಘ್ರ ನನಸಾಗಬಹುದು ಎಂದು ಹಿರಿಯ ಆಟಗಾರ್ತಿ ಅಂಜುಮ್‌ ಚೋಪ್ರಾ ಹೇಳಿದ್ದಾರೆ.

ಇದೇ ವರ್ಷ ನಡೆದ ಟಿ–20 ವಿಶ್ವಕಪ್‌ನಲ್ಲಿ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಭಾರತ ತಂಡ, ಫೈನಲ್‌ನಲ್ಲಿ ಆತಿಥೇಯ ಆಸ್ಟ್ರೇ ಲಿಯಾ ಎದುರು ಮುಗ್ಗರಿಸಿತ್ತು.

‘ಭಾರತ ತಂಡ ವಿಶ್ವಕಪ್‌ ಗೆದ್ದರೆ, ಮಹಿಳಾ ಕ್ರಿಕೆಟ್‌ನಲ್ಲಿ ಬದ ಲಾವಣೆಗೆ ಕಾರಣವಾಗಲಿದೆ’ ಎಂದು ಅಂಜುಮ್‌ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ ಈ ಬಾರಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ಗೆದ್ದುಕೊಂಡಿದ್ದಲ್ಲಿ, ಮಹಿಳಾ ಟಿ–20 ಚಾಲೆಂಜರ್‌ ಟೂರ್ನಿಯಲ್ಲಿ ಪಂದ್ಯಗಳ ಸಂಖ್ಯೆ ಏರಿಕೆಯಾಗುತ್ತಿತ್ತು’ ಎಂದು 17 ವರ್ಷ ಭಾರತ ತಂಡದಲ್ಲಿ ಆಡಿರುವ ಅಂಜುಮ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.