ADVERTISEMENT

ಮಹಿಳೆಯರ ಟಿ20 ಕ್ರಿಕೆಟ್ ಚಾಲೆಂಜರ್ಸ್ ಟೂರ್ನಿ: ಶಫಾಲಿ ಮಿಂಚು‍; ವೆಲೊಸಿಟಿಗೆ ಜಯ

ಹರ್ಮನ್‌ಪ್ರೀತ್ ಕೌರ್ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 24 ಮೇ 2022, 16:48 IST
Last Updated 24 ಮೇ 2022, 16:48 IST
ಶಫಾಲಿ ವರ್ಮಾ 
ಶಫಾಲಿ ವರ್ಮಾ    

ಪುಣೆ: ಶಫಾಲಿ ವರ್ಮಾ ಮತ್ತು ಲಾರಾ ವಾಲ್ವ್‌ವಾರ್ಡಿತ್ ಅವರ ಅರ್ಧಶತಕಗಳ ಬಲದಿಂದ ವೆಲೊಸಿಟಿ ತಂಡವು ಮಹಿಳೆಯರ ಟಿ20 ಕ್ರಿಕೆಟ್ ಚಾಲೆಂಜರ್ಸ್ ಟೂರ್ನಿಯ ಪಂದ್ಯದಲ್ಲಿ ಮಂಗಳವಾರ ಜಯಸಾಧಿಸಿತು.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವೆಲೊಸಿಟಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹರ್ಮನ್‌ಪ್ರೀತ್ ಕೌರ್ (71; 51ಎ, 4X7, 6X3) ಅವರ ಅರ್ಧಶತಕದ ಬಲದಿಂದ ಸೂಪರ್‌ನೋವಾಸ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 150 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ವೆಲೊಸಿಟಿ ತಂಡವು 18.2 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 151 ರನ್ ಗಳಿಸಿತು. ಏಳು ವಿಕೆಟ್‌ಗಳಿಂದ ಜಯ ದಾಖಲಿಸಿತು. ಆರಂಭಿಕ ಬ್ಯಾಟರ್ ಶೆಫಾಲಿ (51; 33ಎ, 4X9, 6X1) ಮತ್ತು ಲಾರಾ (51; 35ಎ, 4X7, 6X1) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ADVERTISEMENT

ಸಂಕ್ಷಿಪ್ತ ಸ್ಕೋರು
ಸೂಪರ್‌ನೋವಾಸ್:
20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 150 (ತಾನಿಯಾ ಭಾಟಿಯಾ 36, ಹರ್ಮನ್‌ಪ್ರೀತ್ ಕೌರ್ 71, ಸುನ್ ಲೂಸ್ ಔಟಾಗದೆ 20, ಕೇಟ್ ಕ್ರಾಸ್ 24ಕ್ಕೆ2, ದೀಪ್ತಿ ಶರ್ಮಾ 31ಕ್ಕೆ1)

ವೆಲೊಸಿಟಿ: 18.2 ಓವರ್‌ಗಳಲ್ಲಿ 3ಕ್ಕೆ151 (ಶೆಫಾಲಿ ವರ್ಮಾ 51, ಯಷ್ಟಿಕಾ ಭಾಟಿಯಾ 17, ಲಾರಾ ವೊಲ್‌ವಾರ್ಡೆಟ್ ಔಟಾಗದೆ 51, ದೀಪ್ತಿ ಶರ್ಮಾ ಔಟಾಗದೆ 24, ದಿಯಾಂದ್ರ ಡಾಟಿನ್ 21ಕ್ಕೆ2)

ಫಲಿತಾಂಶ: ವೆಲೊಸಿಟಿ ತಂಡಕ್ಕೆ 7 ವಿಕೆಟ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.