ADVERTISEMENT

ಮಹಿಳಾ ಟಿ20 ಚಾಲೆಂಜ್‌: ಮೂರೇ ತಂಡಗಳ ಸ್ಪರ್ಧೆ ಸಾಧ್ಯತೆ

ಪಿಟಿಐ
Published 12 ಏಪ್ರಿಲ್ 2021, 13:58 IST
Last Updated 12 ಏಪ್ರಿಲ್ 2021, 13:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಮಹಿಳೆಯರ ಟ್ವೆಂಟಿ–20 ಚಾಲೆಂಜ್ ಟೂರ್ನಿಯನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಮೂರು ತಂಡಗಳೊಂದಿಗೇ ನಡೆಸುವ ಸಾಧ್ಯತೆಯಿದೆ. ಪ್ರತಿ ವರ್ಷದಂತೆ ಐಪಿಎಲ್ ಟೂರ್ನಿಯ ಪ್ಲೇ ಆಫ್‌ ಸಂದರ್ಭದಲ್ಲಿ ಮಹಿಳಾ ಚಾಲೆಂಜ್ ಟೂರ್ನಿ ಕೂಡ ನಡೆಯಲಿದೆ.

ಹೋದ ವರ್ಷಬಿಸಿಸಿಐ, ಟೂರ್ನಿಯ ತಂಡಗಳ ಸಂಖ್ಯೆಯನ್ನು ನಾಲ್ಕಕ್ಕೆ ಹೆಚ್ಚಿಸುವ ಚಿಂತನೆ ನಡೆಸಿತ್ತು. ಆದರೆ ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಮೂರು ತಂಡಗಳೊಂದಿಗೆ ಮುಂದುವರಿಯುವ ನಿರೀಕ್ಷೆಯಿದೆ.

‘ಸದ್ಯ ಟೂರ್ನಿಯನ್ನು ಮೂರು ತಂಡಗಳೊಂದಿಗೆ ನಡೆಸುವ ಚಿಂತನೆ ಇದೆ. ಈ ಕುರಿತು ಅಂತಿಮ ನಿರ್ಧಾರವನ್ನು ಶೀಘ್ರ ತೆಗೆದುಕೊಳ್ಳಲಾಗುವುದು. ಟೂರ್ನಿಯನ್ನು ದೆಹಲಿಯಲ್ಲಿ ಆಯೋಜಿಸುವ ಅವಕಾಶವಿದೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಆಟಗಾರ್ತಿಯರ ಪಾಲ್ಗೊಳ್ಳುವಿಕೆ ಕುರಿತು ಮಾತುಕತೆ ನಡೆಯುತ್ತಿದೆ‘ ಎಂದು ಬಿಸಿಸಿಐ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ADVERTISEMENT

ನಾಲ್ಕು ಪಂದ್ಯಗಳನ್ನು ಒಳಗೊಂಡ, ಕಳೆದ ಬಾರಿಯ ಟೂರ್ನಿಯು ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ಶಾರ್ಜಾದಲ್ಲಿ ನಡೆದಿತ್ತು.

ಏಪ್ರಿಲ್ 16ರಂದು ಬಿಸಿಸಿಐ ಅಪೆಕ್ಸ್ ಸಮಿತಿ ಸಭೆಯಲ್ಲಿ ತಂಡಗಳನ್ನು ನಿರ್ಧರಿಸುವ ಕುರಿತು ಚರ್ಚೆ ನಡೆಯಲಿದೆ. ಭಾರತ ಮಹಿಳಾ ತಂಡಕ್ಕೆ ನೆರವು ಸಿಬ್ಬಂದಿಯನ್ನು ನೇಮಿಸುವ ಮತ್ತು ಮುಂಬರುವ ಸರಣಿಗಳ ಕುರಿತು ಚರ್ಚಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.