ADVERTISEMENT

ಮಹಿಳಾ ಏಕದಿನ ವಿಶ್ವಕಪ್: ಶಿವರ್ ಬ್ರಂಟ್‌, ಸೋಫಿಯಾ ಮಿಂಚು

ಪಿಟಿಐ
Published 12 ಅಕ್ಟೋಬರ್ 2025, 1:16 IST
Last Updated 12 ಅಕ್ಟೋಬರ್ 2025, 1:16 IST
<div class="paragraphs"><p> ಶಿವರ್ ಬ್ರಂಟ್&nbsp; ಬ್ಯಾಟಿಂಗ್&nbsp; </p></div>

ಶಿವರ್ ಬ್ರಂಟ್  ಬ್ಯಾಟಿಂಗ್ 

   

–ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್ (ಕಡತದಿಂದ)

ಕೊಲಂಬೊ: ನಾಯಕಿ ನ್ಯಾಟ್‌ ಶಿವರ್ ಬ್ರಂಟ್ (117, 117ಎ) ಅವರ ಅಮೋಘ ಶತಕದ ನಂತರ ಸೋಫಿ ಎಕ್ಲೆಸ್ಟೋನ್ (10–3–17–4) ಅವರ ಸ್ಪಿನ್‌ ಮೋಡಿಯ ನೆರವಿನಿಂದ ಇಂಗ್ಲೆಂಡ್ ತಂಡ ಮಹಿಳಾ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಶನಿವಾರ ಶ್ರೀಲಂಕಾ ತಂಡವನ್ನು 89 ರನ್‌ಗಳಿಂದ ಸುಲಭವಾಗಿ ಸೋಲಿಸಿತು.

ADVERTISEMENT

ಸತತ ಮೂರನೇ ಗೆಲುವಿನಿಂದ ಇಂಗ್ಲೆಂಡ್‌ 6 ಅಂಕಗಳೊಡನೆ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಪ್ರೇಮದಾಸ ಕ್ರೀಡಾಂಗಣದಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಇಂಗ್ಲೆಂಡ್ ತಂಡಕ್ಕೆ ಶಿವರ್ ಬ್ರಂಟ್ ಅವರು ಆಸರೆಯಾದರು. ತಂಡ 50 ಓವರುಗಳಲ್ಲಿ 9 ವಿಕೆಟ್‌ಗೆ 251 ರನ್ ಗಳಿಸಿತು. ಶಿವರ್‌ಬ್ರಂಟ್ ಬಿಟ್ಟರೆ ಆರಂಭ ಆಟಗಾರ್ತಿ ಟಾಮಿ ಬ್ಯೂಮಾಂಟ್‌ (32) ಮತ್ತು ಹೀದರ್‌ ನೈಟ್‌ (29) ಬಿಟ್ಟರೆ ಉಳಿದವರಾರೂ 20ರ ಗಡಿದಾಟಲಿಲ್ಲ. ಆತಿಥೇಯರ ಕಡೆ ಎಡಗೈ ಸ್ನಿನ್ನರ್‌ ಇನೊಕಾ ರಣವೀರ 33 ರನ್ನಿಗೆ 3 ವಿಕೆಟ್‌ ಗಳಿಸಿದರು.

ಉತ್ತರವಾಗಿ ಶ್ರೀಲಂಕಾ ತಂಡ 46ನೇ ಓವರಿನಲ್ಲಿ 164 ರನ್‌ಗಳಿಗೆ ಆಲೌಟ್‌ ಆಯಿತು. ಹಸಿನಿ ಪೆರೇರಾ (35) ಮತ್ತು ಹರ್ಷಿತಾ ಸಮರವಿಕ್ರಮ (33) ಅವರ ಆಟದಿಂದ ಲಂಕಾ ಒಂದು ಹಂತದಲ್ಲಿ 1 ವಿಕೆಟ್‌ಗೆ 95 ರನ್ ಗಳಿಸಿತ್ತು. ಆದರೆ ಎಡಗೈ ಸ್ಪಿನ್ನರ್‌ ಸೋಫಿಯಾ ಅವರ  ದಾಳಿಗೆ ಸಿಲುಕಿ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತ ಸಾಗಿತು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: 50 ಓವರುಗಳಲ್ಲಿ 9ಕ್ಕೆ 253 (ಹೀದರ್ ನೈಟ್‌ 29, ನ್ಯಾಟ್‌  ಶಿವರ್ ಬ್ರಂಟ್‌ 117; ಇನೊಕಾ ರಣವೀರ 33ಕ್ಕೆ3); ಶ್ರೀಲಂಕಾ: 45.4 ಓವರುಗಳಲ್ಲಿ 164 (ಹಸಿನಿ ಪೆರೇರಾ 35, ಹರ್ಷಿತಾ ಸಮರವಿಕ್ರಮ 33, ನೀಲಾಕ್ಷಿಕಾ ಸಿಲ್ವ 23; ನಾಟ್‌ ಶಿವರ್‌–ಬ್ರಂಟ್‌ 25ಕ್ಕೆ2, ಸೋಫಿ ಎಕ್ಲೆಸ್ಟೋನ್‌ 17ಕ್ಕೆ4)