ಕ್ರಿಕೆಟ್
(ಸಾಂಕೇತಿಕ ಚಿತ್ರ)
ಕೊಲಂಬೊ: ಭಾರತ ಮಹಿಳಾ ತಂಡದ ಆಟಗಾರ್ತಿಯರು ಶುಕ್ರವಾರ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಹಾವು ಕಾಣಿಸಿಕೊಂಡಿತು.
ಸಂಜೆ ಸೆಂಟರ್ ಪಿಚ್‌ನಲ್ಲಿ ಅಭ್ಯಾಸ ನಡೆಸಿದ ಆಟಗಾರ್ತಿಯರು ನೆಟ್ಸ್‌ನತ್ತ ತೆರಳುವ ಸಂದರ್ಭದಲ್ಲಿ ಬೂದು–ಕಂದು ಮಿಶ್ರಿತ ಬಣ್ಣದ ಹಾವು ಮೈದಾನದ ಸ್ಟ್ರ್ಯಾಂಡ್ಸ್ ಸಮೀಪದ ಕಾಲುವೆಯ ಬಳಿ ಹರಿದಾಡುತ್ತಿತ್ತು. ಅದನ್ನು ನೋಡಿದ ಆಟಗಾರ್ತಿಯರು ಮತ್ತು ನೆರವು ಸಿಬ್ಬಂದಿ ಕೆಲಹೊತ್ತು ಭಯಭೀತರಾದರು. ಆದರೆ ಮೈದಾನದ ಸಿಬ್ಬಂದಿಯು ಅದೊಂದು ಕೇರೆಹಾವು ವಿಷಕಾರಿಯಲ್ಲ ಎಂದು ಆಟಗಾರ್ತಿಯರಲ್ಲಿ ಧೈರ್ಯ ತುಂಬಿದರು.
‘ಇಲಿಗಳನ್ನು ತಿನ್ನುವ ಹಾವು ಇದಾಗಿದ್ದು, ವಿಷಕಾರಿಯಲ್ಲ. ಇಲ್ಲಿ ಇಂತಹ ಹಾವುಗಳು ಸರ್ವೇಸಾಮಾನ್ಯ’ ಎಂದೂ ಮೈದಾನದ ಸಿಬ್ಬಂದಿ ಹೇಳಿದರು.
ಭಾರತ ತಂಡವು ಇದೇ ಭಾನುವಾರ ಇಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈಚೆಗೆ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಜಯಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.