ADVERTISEMENT

ಪಂದ್ಯಕ್ಕೆ ಮಳೆ ಅಡ್ಡಿ ಪರಿಹಾರಕ್ಕೆ ಗಂಗೂಲಿ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 20:40 IST
Last Updated 14 ಜೂನ್ 2019, 20:40 IST
ಸೌರವ್‌ ಗಂಗೂಲಿ
ಸೌರವ್‌ ಗಂಗೂಲಿ   

ಲಂಡನ್: ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಳೆಯಿಂದಾಗಿ ಪಂದ್ಯಗಳು ಸ್ಥಗಿತಗೊಳ್ಳುವುದನ್ನು ತಪ್ಪಿಸಲು ಭಾರತದ ಹಿರಿಯ ಆಟಗಾರ ಸೌರವ್ ಗಂಗೂಲಿ ಸಲಹೆ ನೀಡಿದ್ದಾರೆ.

‘ಕೋಲ್ಕತ್ತ ಈಡನ್ ಗಾರ್ಡನ್‌ನಲ್ಲಿ ನಾವು ಕುಡ ಇಂಗ್ಲೆಂಡ್‌ನಲ್ಲಿ ತಯಾರಾದ ಕವರ್‌ಗಳನ್ನೇ ಬಳಸುತ್ತಿದ್ದೇವೆ. ಆದರೆ, ಪಿಚ್‌ ಜೊತೆಗೆ ಔಟ್‌ಫೀಲ್ಡ್‌ಗೂ ಹೊದಿಕೆ ಹಾಕುತ್ತೇವೆ. ಆದ್ದರಿಂದ ಮಳೆ ನಿಂತು ಹತ್ತು ನಿಮಿಷದ ನಂತರ ಹೊದಿಕೆ ತೆಗೆದರೆ ಮೈದಾನದಲ್ಲಿ ತೇವ ತೀರಾ ಕಡಿಮೆ ಇರುತ್ತದೆ. ಬರೀ ಪಿಚ್ ಮೇಲೆ ಹೊದಿಕೆ ಹಾಕುವುದರಿಂದ ಪ್ರಯೋಜನವಿಲ್ಲ. ಮೂವರ್ತು ಯಾರ್ಡ್ಸ್‌ ಏರಿಯಾದಲ್ಲಿ ನೀರು ಹಾಗೆಯೇ ಉಳಿಯುತ್ತದೆ. ಇದರಿಂದಾಗಿ ಹುಲ್ಲಿನಂಕಣದಲ್ಲಿ ನೀರು ಬೇಗ ಒಣಗುವುದಿಲ್ಲ’ ಎಂದು ಹೇಳಿದ್ದಾರೆ.

‘ಇಂಗ್ಲೆಂಡ್‌ನಲ್ಲಿಯೇ ಕವರ್‌ಗಳು ಲಭ್ಯವಾಗುವುದರಿಂದ ತೆರಿಗೆ ರಹಿತವಾಗಿರುತ್ತವೆ. ಆದ್ದರಿಂದ ಖರ್ಚು ಕೂಡ ಕಡಿಮೆಯಾಗುತ್ತದೆ. ಮುಖ್ಯವಾದ ಪಂದ್ಯಗಳನ್ನು ನಡೆಸಲು ಈ ಕ್ರಮ ಅಗತ್ಯ’ ಎಂದು ಅವರು ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯವು ಮಳೆಗೆ ರದ್ದಾದ ನಂತರ ಮಾತನಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.