ADVERTISEMENT

CWC 2023 | ಮೈದಾನಕ್ಕೆ ನುಗ್ಗಿದ ವ್ಯಕ್ತಿ ಒಂದು ದಿನದ ಮಟ್ಟಿಗೆ ಪೊಲೀಸ್ ವಶಕ್ಕೆ

ಪಿಟಿಐ
Published 20 ನವೆಂಬರ್ 2023, 15:53 IST
Last Updated 20 ನವೆಂಬರ್ 2023, 15:53 IST
<div class="paragraphs"><p> ಮೈದಾನಕ್ಕೆ ನುಗ್ಗಿದ&nbsp;ಪ್ಯಾಲೆಸ್ಟೀನ್ ಬೆಂಬಲಿಗ</p></div>

ಮೈದಾನಕ್ಕೆ ನುಗ್ಗಿದ ಪ್ಯಾಲೆಸ್ಟೀನ್ ಬೆಂಬಲಿಗ

   

ರಾಯಿಟರ್ಸ್‌ ಚಿತ್ರ

ಅಹಮದಾಬಾದ್: ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಸಂದರ್ಭದಲ್ಲಿ ಪ್ಯಾಲೆಸ್ಟೀನ್ ಪರ ಘೋಷಣೆಯುಳ್ಳ ಟಿ–ಶರ್ಟ್‌ ಧರಿಸಿ ಮೈದಾನಕ್ಕೆ ನುಗ್ಗಿದ ವ್ಯಕ್ತಿಯನ್ನು ಗಾಂಧಿನಗರ ನ್ಯಾಯಾಲಯ ಒಂದು ದಿನದ ಮಟ್ಟಿಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ.

ADVERTISEMENT

ವೆನ್ ಜಾನ್ಸನ್ಸ್‌ (24) ಎಂಬ ವ್ಯಕ್ತಿ ಭಾನುವಾರ ಮಧ್ಯಾಹ್ನ 3ರ ಹೊತ್ತಿಗೆ ಪಾನೀಯ ವಿರಾಮ ಸಂದರ್ಭದಲ್ಲಿ ಕ್ರೀಡಾಂಗಣದೊಳಗೆ ನುಗ್ಗಿ, ವಿರಾಟ್ ಕೊಹ್ಲಿಯನ್ನು ತಬ್ಬಿಕೊಂಡಿದ್ದ. ತಕ್ಷಣವೇ ಭದ್ರತಾ ಸಿಬ್ಬಂದಿ ಈತನನ್ನು ಹಿಡಿದೊಯ್ದಿದ್ದರು. ಚಂದಖೇಡಾ ಪೊಲೀಸರು ಈತನನ್ನು ಬಂಧಿಸಿದರು.

ಸೋಮವಾರ ಈತನನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ಹೆಚ್ಚಿನ ವಿಚಾರಣೆಗೆ ಈತನನ್ನು ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಕೋರಿದರು. ಇದನ್ನು ನ್ಯಾಯಾಲಯ ಪುರಸ್ಕರಿಸಿ ಒಂದು ದಿನದ ಮಟ್ಟಿಗೆ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಿದೆ.

ವಿಚಾರಣೆ ವೇಳೆ ತಾನೊಬ್ಬ ಕೊಹ್ಲಿ ಅಪ್ಪಟ ಅಭಿಮಾನಿ ಎಂದು ಜಾನ್ಸನ್ ಹೇಳಿಕೊಂಡಿದ್ದಾನೆ. 15 ಜನ ಪೊಲೀಸರ ಪಡೆ ಇದ್ದರೂ ಎತ್ತರದ ತಡೆಬೇಲಿ ಹಾರಿ ಈತ ಕ್ರೀಡಾಂಗಣದೊಳಗೆ ನುಸುಳಿದ್ದ. ಪ್ಯಾಲೆಸ್ಟೀನ್ ಧ್ವಜ ಮಾದರಿಯ ಮಾಸ್ಕ್‌ ಧರಿಸಿದ್ದ, ‘ಪ್ಯಾಲೆಸ್ಟೀನ್ ಮೇಲೆ ಬಾಂಬ್ ದಾಳಿ ನಿಲ್ಲಿಸಿ, ಪ್ಯಾಲೆಸ್ಟೀನಿಯನ್ನರನ್ನು ರಕ್ಷಿಸಿ‘ ಎಂದು ಬರೆದಿದ್ದ ಟಿ–ಶರ್ಟ್ ಧರಿಸಿದ್ದ.

ಜಾನ್ಸನ್‌ ಈ ಹಿಂದೆಯೂ ಇಂಥ ಕೃತ್ಯಗಳನ್ನು ಎಸಗಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈತ ಹಲವು ಬಾರಿ ಕ್ರೀಡಾಂಗಣದೊಳಗೆ ನುಗ್ಗಿ ದಾಂಧಲೆ ನಡೆಸಿದ್ದ. ಟಿಕ್‌ಟಾಕ್‌ ಮೂಲಕ ಪ್ರಚಾರ ಪಡೆಯಲು ಈತ ಹೀಗೆ ಮಾಡಿರುವ ಸಾಧ್ಯತೆ ಇದೆ. ಆದರೂ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.