ADVERTISEMENT

Womens World Cup: ಪಾಕಿಸ್ತಾನಕ್ಕೆ 306 ರನ್‌ ಗುರಿ ನೀಡಿದ ದಕ್ಷಿಣ ಆಫ್ರಿಕಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಅಕ್ಟೋಬರ್ 2025, 9:14 IST
Last Updated 21 ಅಕ್ಟೋಬರ್ 2025, 9:14 IST
   

ಕೊಲಂಬೊ: ಮಹಿಳಾ ವಿಶ್ವಕಪ್‌ನ 22ನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಮಳೆ ಪೀಡಿತ ಪಂದ್ಯದಲ್ಲಿ 40 ಓವರ್‌ಗಳ ಅಂತ್ಯಕ್ಕೆ 9 ವಿಕೆಟ್‌ಗಳನ್ನು ಕಳೆದುಕೊಂಡು 312 ರನ್‌ ಗಳಿಸಿತು.

ಕೊಲಂಬೊದ ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಪಡಿಸಿತು. ಹಾಗಾಗಿ ಪಂದ್ಯವನ್ನು 40 ಓವರ್‌ಗಳಿಗೆ ಇಳಿಸಲಾಗಿತ್ತು.

ಡಿಎಲ್‌ಎಸ್‌ ಅನ್ವಯ ಪಾಕಿಸ್ತಾನಕ್ಕೆ 40 ಓವರ್‌ಗೆ 306 ರನ್‌ ಗುರಿ ನೀಡಲಾಗಿದೆ.

ADVERTISEMENT

ದಕ್ಷಿಣ ಆಫ್ರಿಕಾ ಪರ ನಾಯಕಿ ಮತ್ತು ಆರಂಭಿಕ ಆಟಗಾರ್ತಿ ಲಾರಾ ವೊಲ್ವಾರ್ಡ್ ಅವರು 90 ರನ್‌ (82 ಎಸೆತ) ಗಳಿಸಿ, ಭದ್ರ ಅಡಿಪಾಯ ಒದಗಿಸಿದರು. ಇದರಲ್ಲಿ 10 ಬೌಂಡರಿ ಹಾಗು 2 ಸಿಕ್ಸರ್‌ಗಳಿದ್ದವು.

ಮಧ್ಯಮ ಕ್ರಮಾಂಕದಲ್ಲಿ ಸುನೆ ಲೂಸ್ 61 ರನ್‌ (59 ಎಸೆತ), ನಾಡಿನ್ ಡಿ ಕ್ಲರ್ಕ್ 41 ರನ್‌ (16 ಎಸೆತ) ಹಾಗೂ ಮರಿಜಾನ್ನೆ ಕಪ್ ಅವರು ಔಟಾಗದೇ 68 ರನ್‌(43 ಎಸೆತ) ಗಳಿಸುವ ಮೂಲಕ ಉತ್ತಮ ಆಟವಾಡಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಪಾಕ್‌ ಪರ ನಶ್ರಾ ಸಂಧು ಹಾಗೂ ಸಾದಿಯಾ ಇಕ್ಬಾಲ್ ತಲಾ 3 ವಿಕೆಟ್‌ ಪಡೆದು ಮಿಂಚಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.