ವಡೋದರಾ: ನಾಟ್ ಸಿವರ್ ಬ್ರಂಟ್ ಅವರ ಭರ್ಜರಿ ಅರ್ಧಶತಕ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಸಮಯೋಚಿತ ಆಟದಿಂದಾಗಿ ಇಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 164 ರನ್ ಗಳಿಸಿದೆ.
ಕಳಪೆ ಆರಂಭ ಪಡೆದ ಮುಂವೈ ತಂಡಕ್ಕೆ ಇವರಿಬ್ಬರೂ ಆಸರೆಯಾದರು. ಬ್ರಂಟ್ ಅಜೇಯ 80 ರನ್ ಗಳಿಸಿದರೆ, ಕೌರ್ 42 ರನ್ ಗಳಿಸಿದರು. ನಂತರದ ಹೆಚ್ಚಿನ ಸ್ಕೋರ್ ಆರಂಭಿಕ ಆಟಗಾರ್ತಿ ಭಾಟಿಯಾ ಅವರದ್ದು. ಅವರ ಕಾಣಿಕೆ ಕೇವಲ 11 ರನ್. ಉಳಿದವರು ಎರಡಂಕಿ ಮೊತ್ತ ದಾಟಲು ವಿಫಲರಾದರು.
ಇದರಿಂದಾಗಿ 19.1 ಓವರ್‌ಗಳಲ್ಲಿ ಮುಂಬೈ ತಂಡ ಆಲೌಟ್ ಆಯಿತು.
ಅನಬೆಲ್ ಸುತರ್‌ಲ್ಯಾಂಡ್ 3, ಶಿಖಾ ಪಾಂಡೆ 2 , ಅಲೀಸ್ ಕಾಪ್ಸೆ ಹಾಗೂ ಮಿನ್ನು ಮಣಿ ತಲಾ ಒಂದು ವಿಕೆಟ್ ಪಡೆದರು.
ಟಾಸ್ ಗೆದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.