ADVERTISEMENT

WPL 2026| ಜಿಜಿ ಪರ ಬೆತ್ ಮೂನಿ ಏಕಾಂಗಿ ಹೋರಾಟ; ಡೆಲ್ಲಿ ಗೆಲುವಿಗೆ 169 ರನ್ ಗುರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಫೆಬ್ರುವರಿ 2026, 15:52 IST
Last Updated 3 ಫೆಬ್ರುವರಿ 2026, 15:52 IST
   

ವಡೋದರ: ಇಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್‌ನ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡ ಆರಂಭಿಕ ಬ್ಯಾಟರ್ ಬೆತ್ ಮೂನಿ ಅವರ ಏಕಾಂಗಿ ಹೋರಾಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 168 ರನ್ ಕಲೆಹಾಕಿದೆ. ಆ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 169 ರನ್ ಗುರಿ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ ಆರಂಭಿಕ ಆಘಾತ ಎದುರಿಸಿತು. ಸೋಫಿ ಡಿವೈನ್ (6 ರನ್), ಅನುಷ್ಕ ಶರ್ಮಾ (1 ರನ್6), ಕನಿಕಾ ಅಹುಜಾ (6 ರನ್) ಹಾಗೂ ನಾಯಕಿ ಆಶ್ಲೀ ಗಾರ್ಡ್ನರ್ ಶೂನ್ಯಕ್ಕೆ ನಿರ್ಗಮಿಸುವ ಮೂಲಕ ಆಘಾತ ಅನುಭವಿಸಿತು.

ನಂತರ ಬಂದ ಜಾರ್ಜಿಯ ವಾರೆಹನ್ ಜೊತೆಗೂಡಿದ ಮೂನಿ (ಅಜೇಯ 62 ರನ್, 51ಎ, 4X6) ಅಮೋಘ ಇನಿಂಗ್ಸ್ ಕಟ್ಟಿದರು. ಆ ಮೂಲಕ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು.

ADVERTISEMENT

ಡೆಲ್ಲಿ ಪರ ಚಿನೆಲ್ಲೆ ಹೆನ್ರಿ (3), ನಂದನಿ ಶರ್ಮಾ (2) ವಿಕೆಟ್ ಪಡೆದು ಮಿಂಚಿದರು.

ಇಂದಿನ ಪಂದ್ಯ ಗೆಲ್ಲುವ ತಂಡ ಫೈನಲ್ ಪ್ರವೇಶ ಪಡೆಯಲಿದೆ. ಅಲ್ಲಿ, ಈಗಾಗಲೇ ಫೈನಲ್ ತಲುಪಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.