ADVERTISEMENT

ಬಿಬಿಸಿ ಪ್ರಶಸ್ತಿಗೆ ಸಾಕ್ಷಿ, ವಿನೇಶಾ ನಾಮನಿರ್ದೇಶನ

ಪಿಟಿಐ
Published 7 ಫೆಬ್ರುವರಿ 2023, 4:53 IST
Last Updated 7 ಫೆಬ್ರುವರಿ 2023, 4:53 IST
ಬಿಬಿಸಿ ಭಾರತೀಯ ಕ್ರೀಡಾಮಹಿಳೆ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಪಿ.ವಿ. ಸಿಂಧು, ವಿನೇಶಾ ಪೋಗಟ್, ನಿಕತ್ ಜರೀನ್, ಸಾಕ್ಷಿ ಮಲಿಕ್ ಮತ್ತು ಮೀರಾಬಾಯಿ ಚಾನು 
ಬಿಬಿಸಿ ಭಾರತೀಯ ಕ್ರೀಡಾಮಹಿಳೆ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಪಿ.ವಿ. ಸಿಂಧು, ವಿನೇಶಾ ಪೋಗಟ್, ನಿಕತ್ ಜರೀನ್, ಸಾಕ್ಷಿ ಮಲಿಕ್ ಮತ್ತು ಮೀರಾಬಾಯಿ ಚಾನು    

ನವದೆಹಲಿ: ಒಲಿಂಪಿಯನ್ ಕುಸ್ತಿಪಟುಗಳಾದ ವಿನೇಶಾ ಪೋಗಟ್ ಹಾಗೂ ಸಾಕ್ಷಿ ಮಲಿಕ್ ಅವರನ್ನು ಬಿಬಿಸಿ ಭಾರತದ ಮಹಿಳಾ ಕ್ರೀಡಾಪಟು ವಾರ್ಷಿಕ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ನಡೆದಿದ್ದ ಕುಸ್ತಿಪಟುಗಳ ಧರಣಿಯಲ್ಲಿ ವಿನೇಶಾ ಮತ್ತು ಸಾಕ್ಷಿ ಕೂಡ ಭಾಗವಹಿಸಿದ್ದರು. ಸೋಮವಾರ ಪ್ರಕಟಿಸಲಾಗಿರುವ ಪಟ್ಟಿಯಲ್ಲಿ ಭಾರತದ ವೇಟ್‌ಲಿಫ್ಟರ್ ಮೀರಾಬಾಯಿ ಚಾನು, ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಮತ್ತು ಬಾಕ್ಸಿಂಗ್ ತಾರೆ ನಿಖತ್ ಜರೀನ್ ಅವರಿದ್ದಾರೆ.

ತಜ್ಞ ನಿರ್ಣಾಯಕರ ತಂಡವು ಈ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಕ್ರೀಡಾ ಪತ್ರಕರ್ತರು ಹಾಗೂ ಲೇಖಕರೂ ಇದ್ದರು. ಆಟಗಾರರ ಸಾಧನೆಗಳ ಆಧಾರದಲ್ಲಿ ಅವರು ಮತ ಹಾಕಿದ್ದಾರೆ. ಸೋಮವಾರದಿಂದ ಸಾರ್ವಜನಿಕ ಮತ ನೀಡಿಕೆಯೂ ಆರಂಭವಾಗಲಿದೆ. ಫೆಬ್ರುವರಿ 20ರ ಮಧ್ಯರಾತ್ರಿಯವರೆಗೂ ವೋಟಿಂಗ್‌ಗೆ ಅವಕಾಶವಿದೆ. ಮಾರ್ಚ್ 5ರಂದು ವಿಜೇತರನ್ನು ಘೋಷಿಸಲಾಗುವುದು.

ADVERTISEMENT

ಈ ವರ್ಷ ಬಿಬಿಸಿ ಭಾರತೀಯ ಪ್ಯಾರ ಕ್ರೀಡಾಮಹಿಳೆ ಪ್ರಶಸ್ತಿಯನ್ನು ನೀಡಲು ಆರಂಭಿಸಲಾಗುತ್ತಿದೆ ಎಂದು ಬಿಬಿಸಿ ನ್ಯೂಸ್ ಭಾರತದ ಮುಖ್ಯಸ್ಥೆ ರೂಪಾ ಝಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.