ADVERTISEMENT

WTC Final 2023| ಅಶ್ವಿನ್ ಕೈಬಿಟ್ಟಿದ್ದಕ್ಕೆ ಮ್ಯಾಥ್ಯೂ ಹೇಡನ್, ಪಾಂಟಿಂಗ್ ಟೀಕೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2023, 14:11 IST
Last Updated 8 ಜೂನ್ 2023, 14:11 IST
ಆರ್‌. ಅಶ್ವಿನ್‌ (ಪಿಟಿಐ)
ಆರ್‌. ಅಶ್ವಿನ್‌ (ಪಿಟಿಐ)   

ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಅನುಭವಿ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಅವರಿಗೆ ಅವಕಶ ನೀಡಬೇಕಿತ್ತು ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗರಾದ ಮ್ಯಾಥ್ಯೂ ಹೇಡನ್ ಹಾಗೂ ರಿಕಿ ಪಾಂಟಿಂಗ್ ಹೇಳಿದ್ದಾರೆ.

ಅಶ್ವಿನ್ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಗ್ರಸ್ಥಾನದಲ್ಲಿರುವ ಬೌಲರ್. 2021–23ನೇ ಸಾಲಿನ ಡಬ್ಲ್ಯುಟಿಸಿಯಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ್ದಾರೆ. ಆದರೂ ಅವರನ್ನು ಭಾರತ ತಂಡವು ಫೈನಲ್‌ನಲ್ಲಿ ಕಣಕ್ಕಿಳಿಸದಿರುವುದು ಈಗ ಬಹಳಷ್ಟು ಕ್ರಿಕೆಟಿಗರಿಂದ ಟೀಕೆಗೊಳಗಾಗಿದೆ.

’ಅಶ್ವಿನ್ ಪ್ರಮುಖ ಆಟಗಾರ. ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಗಳಿಕೆ ಮಾಡಿರುವ ಸಾಧಕ. ಅವರು ತಂಡದಲ್ಲಿದ್ದಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು‘ ಎಂದು ಹೇಡನ್ ಐಸಿಸಿ ವೆಬ್‌ಸೈಟ್‌ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ADVERTISEMENT

’ಆಸ್ಟ್ರೇಲಿಯಾ ತಂಡದಲ್ಲಿ  ಎಡಗೈ ಬ್ಯಾಟರ್‌ಗಳು ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆಫ್‌ಸ್ಪಿನ್ನರ್ ಅಶ್ವಿನ್ ಅವರಿದ್ದರೆ ತಂಡಕ್ಕೆ ಹೆಚ್ಚು ಅನುಕೂಲವಾಗುತ್ತಿತ್ತು. ಅವರನ್ನು ಕೈಬಿಟ್ಟಿರುವುದು ದೊಡ್ಡ ತಪ್ಪು‘  ಎಂದು ಆಸ್ಟ್ರೇಲಿಯಾ ತಂಡದ ಮಾಜಿನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ.

’ಟಾಸ್‌ ಗೆದ್ದರೂ ಭಾರತವು ನಿರ್ಧಾರ ಕೈಗೊಳ್ಳುವಲ್ಲಿ ಸ್ವಲ್ಪ ಎಡವಿತು. ಆಸ್ಟ್ರೇಲಿಯಾ ತಂಡವು ಟೆಸ್ಟ್‌ಗಳಲ್ಲಿ ಯಾವಾಗಲೂ ಮೊದಲಿಗೆ ಬ್ಯಾಟಿಂಗ್ ಮಾಡುವುದನ್ನೇ ಇಷ್ಟಪಡುತ್ತದೆ. ಅದೇ ಅವರಿಗೆ ಸಿಕ್ಕಿತು. ಅದನ್ನು ಸದುಪಯೋಗಪಡಿಸಿಕೊಂಡರು‘ ಎಂದರು. 

ರಿಕಿ ಪಾಂಟಿಂಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.