ADVERTISEMENT

ಜಿಂಬಾಬ್ವೆ: ಕ್ರಿಕೆಟ್‌ ಸಂಸ್ಥೆ ಅಮಾನತು

ಪಿಟಿಐ
Published 22 ಜೂನ್ 2019, 20:00 IST
Last Updated 22 ಜೂನ್ 2019, 20:00 IST

ಹರಾರೆ: ಜಿಂಬಾಬ್ವೆಯ ಕ್ರಿಕೆಟ್‌ (ಝಡ್‌ಸಿ) ಸಂಸ್ಥೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಲ್ಲಿನ ಕ್ರೀಡಾ ಮತ್ತು ಮನರಂಜನಾ ಆಯೋಗ (ಎಸ್ಆರ್‌ಸಿ) ಅಮಾನತು ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.

ಎಸ್ಆರ್‌ಸಿ ದೇಶದ ಎಲ್ಲ ನೋಂದಾಯಿತ ಕ್ರೀಡಾ ಸಂಸ್ಥೆಗಳ ಮೇಲೆ ನಿಯಂತ್ರಣ ಹೊಂದಿದೆ.ಜಿಂಬಾಬ್ವೆ ಕ್ರಿಕೆಟ್‌ ಸಂಸ್ಥೆಯ ಚುನಾವಣಾ ಪ್ರಕ್ರಿಯೆ ವೇಳೆ ಸಂವಿಧಾನದ ಉಲ್ಲಂಘನೆ ಮತ್ತು ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ದೂರುಗಳು ಕೇಳಿಬಂದಿತ್ತು. ಆ ಕಾರಣ ಅದನ್ನು ಚುನಾವಣೆಯನ್ನು ಅಮಾನತುಗೊಳಿಸುವಂತೆ ಎನ್‌ಆರ್‌ಸಿ ನಿರ್ದೇಶನ ನೀಡಿತ್ತು. ಆದರೆ ಕ್ರಿಕೆಟ್‌ ಮಂಡಳಿ ಈ ಸೂಚನೆಯನ್ನು ನಿರ್ಲಕ್ಷಿಸಿತ್ತು. ಇದಾಗಿ ಒಂದು ವಾರದಲ್ಲೇ ಸಂಸ್ಥೆಯನ್ನು ಅಮಾನತು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT