ADVERTISEMENT

ಫಿಫಾ ರೆಫರಿ ಪಟ್ಟಿಯಲ್ಲಿ ಭಾರತದ 18 ಮಂದಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 11:34 IST
Last Updated 23 ಡಿಸೆಂಬರ್ 2021, 11:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದ 18 ಮಂದಿ ರೆಫರಿಗಳು ಅಂತರರಾಷ್ಟ್ರೀಯ ಫುಟ್‌ಬಾಲ್ ಫೆಡರೇಷನ್ (ಫಿಫಾ) ರೆಫರಿಯಿಂಗ್ ಅಂತರರಾಷ್ಟ್ರೀಯ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ.

ಈ ಪಟ್ಟಿಯಲ್ಲಿ ಸ್ಥಾನ ಪಡೆದವರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಲು ಅರ್ಹರಾಗಿರುತ್ತಾರೆ. ಭಾರತದಿಂದ ಆಯ್ಕೆಯಾಗಿರುವ 18 ಮಂದಿಯಲ್ಲಿ 14 ಪುರುಷರು (ಆರು ರೆಫರಿ ಮತ್ತು ಎಂಟು ಸಹಾಯಕ ರೆಫರಿ) ಹಾಗೂ ನಾಲ್ವರು ಮಹಿಳೆಯರು (ಇಬ್ಬರು ರೆಫರಿ ಮತ್ತು ಇಬ್ಬರು ಸಹಾಯಕ ರೆಫರಿ) ಇದ್ದಾರೆ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಗುರುವಾರ ತಿಳಿಸಿದೆ.

ಪುರುಷರು, ರೆಫರಿ: ತೇಜಸ್ ನಾಗವೆಂಕರ್, ಶ್ರೀಕೃಷ್ಣ ಕೊಯಿಮತ್ತೂರ್ ರಾಮಸ್ವಾಮಿ, ರೊವನ್ ಅರುಮುಗುನ್, ಕ್ರಿಸ್ಟಲ್ ಜಾನ್, ಪ್ರಾಂಜಲ ಬ್ಯಾನರ್ಜಿ ವೆಂಕಟೇಶ ರಾಮಚಂದ್ರನ್

ADVERTISEMENT

ಸಹಾಯಕ ರೆಫರಿ: ಸುಮಂತ ದತ್ತಾ, ಅಂತೋನಿ ಅಬ್ರಹಾಂ, ಟೋನಿ ಜೋಸೆಫ್, ಲೂಯಿಸ್ ವೈರಮುತ್ತು, ಟೋನಿ ಜೋಸೆಫ್ ಲೂಯಿಸ್, ವೈರಮುತ್ತು ಪರಶುರಾಮನ್, ಸಮರ್ ಪಾಲ್, ಕೆನಡಿ ಸೇಪಂ, ಅರುಣ ಶಶಿಧರನ್ ಪಿಳ್ಳೈ, ಅಸಿತ್ ಕುಮಾರ್ ಸರ್ಕಾರ್.

ಮಹಿಳೆಯರು: ರೆಫರಿ: ರಂಜಿತಾದೇವಿ ಟೆಕಂ, ಕನಿಕಾ ಬರ್ಮನ್.

ಸಹಾಯಕ ರೆಫರಿ: ಯುವೆನಾ ಫರ್ನಾಂಡಿಸ್, ರಿಯಾಲಂಗ್ ಧಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.