ADVERTISEMENT

ಫುಟ್‌ಬಾಲ್‌: ಭಾರತ ಕಿರಿಯರಿಗೆ ಮತ್ತೆ ಸೋಲು

ಅಫ್ಗಾನಿಸ್ತಾನ ತಂಡಕ್ಕೆ 3–0 ಗೆಲುವು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 17:59 IST
Last Updated 10 ನವೆಂಬರ್ 2019, 17:59 IST

ಅಲ್‌ ಖೋಬರ್‌ (ಸೌದಿ ಅರೇಬಿಯಾ): ಭಾರತ ತಂಡ, ಎಎಫ್‌ಸಿ 19 ವರ್ಷದೊಳಗಿನವರ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲೂ ನಿರಾಸೆ ಅನುಭವಿಸಿತು. ಅಫ್ಗಾನಿಸ್ತಾನ, ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡವನ್ನು 3–0 ಗೋಲಿನಿಂದ ಸೋಲಿಸಿತು.

ಆಡಿದ ಮೂರೂ ಪಂದ್ಯಗಳಲ್ಲಿ ಭಾರತ ಸೋತಂತಾಗಿದೆ. ಪ್ರಿನ್ಸ್‌ ಅಲ್‌ ಜಲಾವಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಅಫ್ಗನ್ನರು ಮೊದಲ ಅರ್ಧದಲ್ಲೇ ಮೂರೂ ಗೋಲುಗಳನ್ನು ಹೊಡೆದರು.ನಾಯಕ ಅಹಮದ್‌ ರಮಕಿ (2ನೇ ನಿಮಿಷ), ಮಿಡ್‌ಫೀಲ್ಡರ್‌ ಅಹಮದ್‌ ನೌಶಾದ್ (4ನೇ) ಮತ್ತು ಖಾತಂ ದೆಲ್‌ (29ನೇ ನಿಮಿಷ) ಗೋಲುಗಳನ್ನು ಗಳಿಸಿದವರು.

ಎರಡನೇ ಅರ್ಧದಲ್ಲಿ ಪ್ರತಿಹೋರಾಟ ತೋರಿದ ಭಾರತ ಕೆಲವು ಅವಕಾಶಗಳನ್ನು ಪಡೆಯಿತು. ಎರಡು ಬಾರಿ ಚೆಂಡು ಕ್ರಾಸ್‌ಬಾರ್‌ಗೆ ತಾಗಿ ಹೊರಹೋಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.