ADVERTISEMENT

ಎಐಎಫ್‌ಎಫ್‌ ಡಿಎಫ್‌ಬಿ ಒಪ್ಪಂದ

ಪಿಟಿಐ
Published 1 ನವೆಂಬರ್ 2019, 19:14 IST
Last Updated 1 ನವೆಂಬರ್ 2019, 19:14 IST

ನವದೆಹಲಿ : ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್ (ಎಐಎಫ್‌ಎಫ್‌) ಜರ್ಮನ್‌ ಫುಟ್‌ ಬಾಲ್ ಸಂಸ್ಥೆಯೊಂದಿಗೆ (ಡಿಎಫ್‌ಬಿ) ಶುಕ್ರವಾರ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದೆ.

ಜರ್ಮನಿಯ ಚಾನ್ಸಲರ್‌ ಏಂಜೆಲಾ ಮರ್ಕೆಲ್‌ ಅವರ ಭಾರತದ ಭೇಟಿ ಸಂದರ್ಭದಲ್ಲೇ ಈ ಒಪ್ಪಂದ ಏರ್ಪಟ್ಟಿರುವುದು ಕಾಕತಾಳೀಯ. ಎಐಎಫ್‌ಎಫ್‌ ಪ್ರಧಾನ ಕಾರ್ಯ ದರ್ಶಿ ಕುಶಾಲ್‌ ದಾಸ್‌ ಹಾಗೂ ಡಿಎಫ್‌ಬಿ ಪ್ರಧಾನ ಕಾರ್ಯದರ್ಶಿ ಫ್ರೆಡರಿಕ್‌ ಕರ್ಟಿಯಸ್‌ ಉಭಯ ಆಡಳಿತ ಮಂಡಳಿಗಳ ಪರವಾಗಿ ಪತ್ರಕ್ಕೆ ಸಹಿ ಹಾಕಿದರು.

‘ಈ ಒಡಂಬಡಿಕೆಯು ಭಾರತ ಫುಟ್‌ಬಾಲ್‌ಗೆ ಸಂಬಂಧಿಸಿದಂತೆ ಕೋಚ್‌ ಶಿಕ್ಷಣ, ಪ್ರತಿಭೆಗಳ ಹುಡುಕಾಟ ಹಾಗೂ ಬೆಳವಣಿಗೆ, ಭಾರತಕ್ಕೆ ವೃತ್ತಿಪರ ರೆಫರಿಗಳ ನಿಯೋಜನೆ ಸೇರಿದಂತೆ ಹಲವು ವಿಷಯಗಳನ್ನು ಒಳಗೊಂಡಿದೆ’ ಎಂದು ಎಐಎಫ್‌ಎಫ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.