ADVERTISEMENT

ಫಿಫಾ ವಿಶ್ವಕಪ್ ಟಿಕೆಟ್‌ಗಾಗಿ ಮೊಸಳೆಗಳಿದ್ದ ನದಿಗೆ ಜಿಗಿದ!

ವಿಚಿತ್ರ ಕಥೆಗಳ ಪುಸ್ತಕ ಬಿಡುಗಡೆ

ರಾಯಿಟರ್ಸ್
Published 18 ನವೆಂಬರ್ 2022, 21:42 IST
Last Updated 18 ನವೆಂಬರ್ 2022, 21:42 IST
ಕತಾರ್‌ನಲ್ಲಿ ಡಿಯಾಗೊ ಮರಡೋನಾ ಭಾವಚಿತ್ರದೊಂದಿಗೆ ಅಭಿಮಾನಿಗಳು  –ಎಎಫ್‌ಪಿ ಚಿತ್ರ
ಕತಾರ್‌ನಲ್ಲಿ ಡಿಯಾಗೊ ಮರಡೋನಾ ಭಾವಚಿತ್ರದೊಂದಿಗೆ ಅಭಿಮಾನಿಗಳು  –ಎಎಫ್‌ಪಿ ಚಿತ್ರ   

ಬ್ಯೂನಸ್ ಐರಿಸ್: ಅಭಿಮಾನಿಯೊಬ್ಬ 2010ರ ವಿಶ್ವಕಪ್ ಟೂರ್ನಿಯ ಪಂದ್ಯಗಳ ಟಿಕೆಟ್‌ಗಾಗಿ ಮೊಸಳೆಗಳೇ ತುಂಬಿದ್ದ ನದಿಗೆ ಹಾರಿ ಈಜಿದ್ದನಂತೆ!

ಉರುಗ್ವೆಯ ಆಟಗಾರನೊಬ್ಬ ಹೃದಯಾಘಾತ ಅನುಭವಿಸಿದ ನಂತರವೂ ಪಂದ್ಯಕ್ಕೆ ಮರಳಿದ್ದ.ಇನ್ನೊಂದು ಪ್ರಕರಣದಲ್ಲಿ ಲಯೊನೆಲ್ ಮೆಸ್ಸಿ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ ಅವರಲ್ಲಿ ಯಾರು ಶ್ರೇಷ್ಠರು ಎಂದು ವಾದ, ಪ್ರತಿವಾದ ಮಾಡಿದ್ದ ದಂಪತಿಯು ವಿಚ್ಛೇದನ ಪಡೆದಿತ್ತು.

ಹೌದು; ಈ ಹಿಂದಿನ ವಿಶ್ವಕಪ್ ಟೂರ್ನಿಗಳಲ್ಲಿ ನಡೆದ ಇಂತಹ ವಿಚಿತ್ರ ಘಟನೆಗಳು ತುಂಬಿರುವ ‘ಇನ್‌ಕ್ರೆಡಿಬಲ್ ವರ್ಲ್ಡ್‌ಕಪ್ ಸ್ಟೋರಿಸ್’ ಪುಸ್ತಕವನ್ನು ಅರ್ಜೆಂಟಿನಾದ ಲುಸಿಯಾನೊ ವೆರ್ನಿಕ್ ಬರೆದಿದ್ದಾರೆ. ಇದು 20 ಭಾಷೆಗಳಲ್ಲಿ ಪ್ರಕಟವಾಗುತ್ತಿದ್ದು ಭಾನುವಾರ ನಡೆಯುವ ಉದ್ಘಾಟನೆ ಪಂದ್ಯದ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ.

ADVERTISEMENT

‘ವಿಶ್ವದ ಅತ್ಯಂತ ಮಹತ್ವದ ಟೂರ್ನಿ ಆಗಿದೆ. ಇದನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಿದ್ದೇನೆ’ ಎಂದು ಲುಸಿಯಾನೊ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಪುಸ್ತಕದಲ್ಲಿ ಅವರು ಬರೆದಿರುವ ಕೆಲವು ಸ್ವಾರಸ್ಯಕರ ಘಟನೆಗಳಿವೆ.

1994 ರಲ್ಲಿ ಅಲ್ಬೆನಿಯಾದ ವ್ಯಕ್ತಿಯೊಬ್ಬ ಬೆಟ್ಟಿಂಗ್ ಕೇಂದ್ರಕೆಕ್ ತೆರಳಿದ ಬಲ್ಗೆರಿಯಾ ಎದುರಿನ ಪಂದ್ಯದಲ್ಲಿ ಅರ್ಜೆಂಟಿನಾ ಜಯಿಸಲಿದೆ ಎಂದು ತನ್ನ ಪತ್ನಿಯನ್ನೇ ಪಣಕ್ಕಿಟ್ಟ. ಆದರೆ ಅದರಲ್ಲಿ ಸೋತು ಹೆಂಡತಿಯನ್ನು ಕಳೆದುಕೊಂಡ.

2010ರ ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾದ ಬಾನುಲಿ ಕೇಂದ್ರವೊಂದು ಫೈನಲ್ ಪಂದ್ಯದ ಎರಡು ಟಿಕೆಟ್‌ಗಳನ್ನು ಉಚಿತವಾಗಿ ನೀಡುವುದಾಗಿ ಹೇಳಿತು. ಆದರೆ ಬಹಳಷ್ಟು ಮೊಸಳೆಗಳಿದ್ದ ನದಿಯಲ್ಲಿ ಹಾರಿ ಈಜಿ ಮರಳಿಬರಬೇಕೆಂದು ಷರತ್ತು ಒಡ್ಡಿತು. ಅದಕ್ಕಾಗಿ ಅಭಿಮಾನಿಯೊಬ್ಬ ಜಿಗಿದಿದ್ದ.

‘ಇದು ನನ್ನ ಮೂರನೇ ಆವೃತ್ತಿಯ ಕೃತಿಯಾಗಿದೆ. ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯ ಸುತ್ತಮುತ್ತಲಿನ ವಿಚಿತ್ರ ಘಟನೆಗಳನ್ನು ಪಟ್ಟಿ ಮಾಡಲು ಆರಂಭಿಸಿದ್ದೇನೆ’ ಎಂದು 52 ವರ್ಷದ ಲುಸಿಯಾನೊ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.