ADVERTISEMENT

ಚಾಂಪಿಯನ್ಸ್ ಲೀಗ್‌: ಸೌತಾಂಪ್ಡನ್‌ಗೆ ಮಣಿದ ಆರ್ಸೆನಲ್

ರಾಯಿಟರ್ಸ್
Published 17 ಏಪ್ರಿಲ್ 2022, 14:24 IST
Last Updated 17 ಏಪ್ರಿಲ್ 2022, 14:24 IST
ಜಾನ್ ಬೆಡ್ನಾರೆಕ್ (ಎಡ) –ಎಎಫ್‌ಪಿ ಸಂಗ್ರಹ ಚಿತ್ರ
ಜಾನ್ ಬೆಡ್ನಾರೆಕ್ (ಎಡ) –ಎಎಫ್‌ಪಿ ಸಂಗ್ರಹ ಚಿತ್ರ   

ಸೌತಾಂಪ್ಡನ್: ಮೊದಲಾರ್ಧದ ಕೊನೆಯ ನಿಮಿಷದಲ್ಲಿ ಜಾನ್ ಬೆಡ್ನಾರೆಕ್ ಗಳಿಸಿದ ಗೋಲಿನ ಮೂಲಕ ಸೌತಾಂಪ್ಟನ್ ತಂಡ ಪ್ರೀಮಿಯರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ರೋಚಕ ಜಯ ಗಳಿಸಿತು.

ಶನಿವಾರ ರಾತ್ರಿ ಸೇಂಟ್ ಮೇರಿಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್ಸೆನಲ್ 0–1ರಲ್ಲಿ ಸೌತಾಂಪ್ಟನ್‌ಗೆ ಮಣಿಯಿತು. ಇದು ತಂಡದ ಸತತ ಮೂರನೇ ಸೋಲು.

ಪಂದ್ಯದ ನಂತರ ಮಾತನಾಡಿದ ಆರ್ಸೆನಲ್ ಮ್ಯಾನೇಜರ್ ಮೈಕೆಲ್ ಆರ್ಟೆಟಾ ‘ಇತ್ತೀಚಿನ ಪಂದ್ಯಗಳಲ್ಲಿ ತಂಡ ತೋರಿರುವ ನೀರಸ ಪ್ರದರ್ಶನ ಮುಂದಿನ ಹಾದಿಗೆ ಮಾರಕವಾಗಲಿದೆ’ ಎಂದು ಹೇಳಿದರು.

ADVERTISEMENT

ಪಂದ್ಯದುದ್ದಕ್ಕೂ ಆರ್ಸೆನಲ್ ಹಿಡಿತ ಸಾಧಿಸಿತ್ತು. ಆದರೂ ಚೆಂಡನ್ನು ಗುರಿ ಮುಟ್ಟಿಸಲು ಆ ತಂಡದ ಆಟಗಾರರಿಗೆ ಸಾಧ್ಯವಾಗಲಿಲ್ಲ. ಸೌತಾಂಪ್ಟನ್ ಗೋಲ್‌ಕೀಪರ್ ಫ್ರೇಜರ್ ಫೋರ್ಸ್ಟರ್ ಅವರು ಆರ್ಸೆನಲ್‌ ಫಾರ್ವರ್ಡ್ ವಿಭಾಗದ ಮುಂದೆ ಗೋಡೆಯಾಗಿ ನಿಂತರು. ಗುರಿಯತ್ತ 23 ಬಾರಿ ಚೆಂಡನ್ನು ಒದ್ದರೂ ಯಶಸ್ಸು ಕಾಣಲು ಆರ್ಸೆನಲ್ ವಿಫಲವಾಯಿತು. 44ನೇ ನಿಮಿಷದಲ್ಲಿ ಜಾನ್ ಬೆಡ್ನಾರೆಕ್ ಚೆಂಡನ್ನು ಗುರಿ ತಲುಪಿಸಿದರು.

‘ತಂಡದ ಸದ್ಯದ ಪರಿಸ್ಥಿತಿಯ ಬಗ್ಗೆ ಬೇಸರವಿದೆ. ಮೂರು ಪಂದ್ಯಗಳನ್ನು ವಿಭಿನ್ನ ಬಗೆಯಲ್ಲಿ ಸೋತಿದ್ದೇವೆ. ಸೌತಾಂಪ್ಟನ್ ಎದುರು ಸೋತ ವಿಧಾನವನ್ನು ವಿವರಿಸಲು ಸಾಧ್ಯವೇ ಇಲ್ಲ. ಈ ಪಂದ್ಯವನ್ನು ನೋಡಿದವರು ಆರ್ಸೆನಲ್ ಗೆದ್ದಿದೆ ಎಂದೇ ತಿಳಿದುಕೊಳ್ಳುವಂತಿತ್ತು’ ಎಂದು ಮೈಕೆಲ್ ಆರ್ಟೆಟಾ ಹೇಳದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.