
ಕ್ವಾಲಾಲಂಪುರ: ಭಾರತವು 2031ರ ಏಷ್ಯಾ ಕಪ್ ಫುಟಬಾಲ್ ಟೂರ್ನಿಯ ಆತಿಥ್ಯಕ್ಕೆ ಬಿಡ್ ಸಲ್ಲಿಸಿರುವುದನ್ನು ಏಷ್ಯನ್ ಫುಟ್‌ಬಾಲ್ ಒಕ್ಕೂಟ ಬುಧವಾರ ದೃಢಪಡಿಸಿದೆ. ಭಾರತ ಸೇರಿದಂತೆ ಒಟ್ಟು ಆರು ದೇಶಗಳು ಆತಿಥ್ಯಕ್ಕೆ ಬಿಡ್ ಸಲ್ಲಿಸಿವೆ.
ಬಿಡ್ ಪ್ರಕ್ರಿಯೆಯಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ಹಿಂದೆಸರಿದಿದೆ. ಭಾರತದ ಜೊತೆಗೆ ಆಸ್ಟ್ರೇಲಿಯಾ, ಇಂಡೊನೇಷ್ಯಾ, ಕೊರಿಯಾ, ಕುವೈತ್ ಪಟ್ಟಿಯಲ್ಲಿವೆ. ಈ ದೇಶಗಳ ಜೊತೆ ಕಿರ್ಗಿಸ್ಥಾನ, ತಜಿಕಿಸ್ತಾನ ಮತ್ತು ಉಜ್ಬೇಕಿಸ್ತಾನ ಸಂಯುಕ್ತವಾಗಿ ಆತಿಥ್ಯ ವಹಿಸಲು ಬಿಡ್ ಸಲ್ಲಿಸಿವೆ.
2025ರಲ್ಲಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್, ಈ ಟೂರ್ನಿ ನಡೆಸಲು ಆಸಕ್ತಿ ಪತ್ರ ಸಲ್ಲಿಸಿತ್ತು. ಈ ಪ್ರಯತ್ನಕ್ಕೆ ಸಂಪೂರ್ಣಬೆಂಬಲ ನೀಡುವುದಾಗಿ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದರು.
ಭಾರತ ಹಿಂದೆಂದೂ ಈ ಟೂರ್ನಿಯನ್ನು ಆಯೋಜಿಸಿರಲಿಲ್ಲ. ಈ ಹಿಂದೆ 2023 ಮತ್ತು 2027 ಕೂಟಕ್ಕೆ ಬಿಡ್ ಸಲ್ಲಿಸಿದ್ದರೂ, ನಂತರ ಹಿಂದೆಸರಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.