ನವದೆಹಲಿ: ಹಿನ್ನಡೆ ಕಾಣುತ್ತಿರುವ ಭಾರತದ ಫುಟ್‌ಬಾಲ್ ತಂಡಕ್ಕೆ ನೆರವಾಗಲು, ದಿಗ್ಗಜ ಆಟಗಾರ ಸುನೀಲ್ ಚೆಟ್ರಿ ಅವರು ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಘೋಷಿಸಿರುವ ನಿವೃತ್ತಿಯಿಂದ ಹೊರಬರಲು ನಿರ್ಧರಿಸಿದ್ದಾರೆ. ಅವರು ಫಿಫಾ ಸೌಹಾರ್ದ ಪಂದ್ಯಗಳಲ್ಲಿ ರಾಷ್ಟ್ರೀಯ ತಂಡಕ್ಕೆ ಆಡಲಿದ್ದಾರೆ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಗುರುವಾರ ತಿಳಿಸಿದೆ.
‘ಚೆಟ್ರಿ ಮರಳಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಎರಡು ಅಂತರರಾಷ್ಟ್ರೀಯ ಪಂದ್ಯಗಳಿಗೆ ಕ್ಯಾಪ್ಟನ್, ಲೀಡರ್, ಲೆಜೆಂಡ್ ಆಟಗಾರ ಭಾರತ ರಾಷ್ಟ್ರೀಯ ತಂಡಕ್ಕೆ ಹಿಂತಿರುಗಲಿದ್ದಾರೆ’ ಎಂದು ಎಐಎಫ್‌ಎಫ್ ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಬರೆದಿದೆ.
ವೈಭವಯುತ ಫುಟ್‌ಬಾಲ್ ಜೀವನಕ್ಕೆ ವಿದಾಯ ಹೇಳಿ ವರ್ಷದ ಒಳಗೇ, 40 ವರ್ಷ ವಯಸ್ಸಿನ ಚೆಟ್ರಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.
ಮೇಘಾಲಯದ ಶಿಲ್ಲಾಂಗ್‌ನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಭಾರತ ಸೀನಿಯರ್ ಪುರುಷರ ತಂಡವು, ಎರಡು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.