ADVERTISEMENT

ಬೆಂಗಳೂರು ಎಫ್‌ಸಿಗೆ ಎಟಿಕೆಎಂಬಿ ಸವಾಲು

ಐಎಸ್‌ಎಲ್‌: ಗೆಲುವಿನ ವಿಶ್ವಾಸದಲ್ಲಿ ಬೆಂಗಳೂರು ಎಫ್‌ಸಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 17:53 IST
Last Updated 4 ಫೆಬ್ರುವರಿ 2023, 17:53 IST
ಅಭ್ಯಾಸ ನಡೆಸಿದ ಬಿಎಫ್‌ಸಿ ತಂಡದ ರಾಯ್‌ಕೃಷ್ಣ ಮತ್ತು ಸಹ ಆಟಗಾರರು– ಬಿಎಫ್‌ಸಿ ಮೀಡಿಯಾ ಚಿತ್ರ
ಅಭ್ಯಾಸ ನಡೆಸಿದ ಬಿಎಫ್‌ಸಿ ತಂಡದ ರಾಯ್‌ಕೃಷ್ಣ ಮತ್ತು ಸಹ ಆಟಗಾರರು– ಬಿಎಫ್‌ಸಿ ಮೀಡಿಯಾ ಚಿತ್ರ   

ಬೆಂಗಳೂರು: ಸತತ ನಾಲ್ಕು ಪಂದ್ಯಗಳಲ್ಲಿ ಗೆದ್ದು ಆತ್ಮವಿಶ್ವಾಸದ ಗಣಿಯಾಗಿರುವ ಬೆಂಗಳೂರು ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಟೂರ್ನಿಯ ಪಂದ್ಯದಲ್ಲಿ ಭಾನುವಾರ ಎಟಿಕೆ ಮೋಹನ್‌ ಬಾಗನ್ ಸವಾಲು ಸವಾಲು ಎದುರಿಸಲಿದೆ.

ಪ್ಲೇ ಆಫ್‌ ಪ್ರವೇಶದ ಅಂಚಿನಲ್ಲಿರುವ ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ಎಫ್‌ಸಿ (ಬಿಎಫ್‌ಸಿ), ಕೋಲ್ಕತ್ತದ ಸಾಲ್ಟ್‌ಲೇಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲೂ ಗೆಲುವಿನ ವಿಶ್ವಾಸದಲ್ಲಿದೆ.

ಈ ಆವೃತ್ತಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾದ ಮೊದಲ ಪಂದ್ಯದಲ್ಲಿ ಎಟಿಕೆಎಂಬಿ 1–0ಯಿಂದ ಜಯಿಸಿತ್ತು. ಟೂರ್ನಿಯಲ್ಲಿ ತಂಡದ ಪರ ಅತಿ ಹೆಚ್ಚು (7) ಗೋಲು ಗಳಿಸಿರುವ ಡಿಮಿಟ್ರಿ ಪೆಟ್ರಾಟೊಸ್‌ ಅವರನ್ನು ಬೆಂಗಳೂರು ತಂಡ ಕಟ್ಟಿಹಾಕಬೇಕಿದೆ. ಉತ್ತಮ ಲಯದಲ್ಲಿರುವ ಶಿವಶಕ್ತಿ ನಾರಾಯಣನ್‌ ಮತ್ತು ರಾಯ್‌ಕೃಷ್ಣ ಅವರು ಬಿಎಫ್‌ಸಿ ತಂಡದ ಶಕ್ತಿಯಾಗಿದ್ದಾರೆ.

ADVERTISEMENT

ಪಂದ್ಯ ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.