ADVERTISEMENT

ಗ್ಲಾಸ್ಗೊದಲ್ಲೇ ಉಳಿದ ಬಾಲಾ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 19:47 IST
Last Updated 20 ಮಾರ್ಚ್ 2020, 19:47 IST
ಬಾಲಾ ದೇವಿ
ಬಾಲಾ ದೇವಿ   

ನವದೆಹಲಿ: ಸ್ಕಾಟಿಷ್‌ ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ ಕ್ಲಬ್‌, ರೇಂಜರ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡ ಭಾರತದ ಮೊದಲ ಫುಟ್ಬಾಲ್‌ ಆಟಗಾರ್ತಿ ಎಂಬ ಹಿರಿಮೆಯ ಬಾಲಾದೇವಿ, ಇನ್ನಷ್ಟು ದಿನ ಗ್ಲಾಸ್ಗೊದಲ್ಲೇ ಉಳಿದುಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಭಾರತ ಸರ್ಕಾರ ವಿಧಿಸಿದ ಪ್ರವಾಸ ನಿರ್ಬಂಧಗಳ ಕಾರಣ ಅವರ ಈ ಸ್ಥಿತಿಗೆ ಕಾರಣ.

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಪ್ರೀಮಿಯರ್‌ ಲೀಗ್‌ಅನ್ನು ಏಪ್ರಿಲ್‌ 30ಕ್ಕೆ ಮುಂದೂಡಲಾಗಿದೆ. 30 ವರ್ಷದ ಬಾಲಾದೇವಿ ಅವರ ಕೈಯಲ್ಲಿ ಈಗ ಯಾವುದೇ ಟೂರ್ನಿಗಳಿಲ್ಲ. ಹೀಗಾಗಿ ಅವರು ಭಾರತಕ್ಕೆ ಮರಳಬೇಕಿತ್ತು. ಮಾರ್ಚ್‌ 22ರಿಂದ 31ರವರೆಗೆ ವಿದೇಶದಿಂದ ಬರುವ ಎಲ್ಲ ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನುಸರ್ಕಾರ, ಗುರುವಾರ ಸ್ಥಗಿತಗೊಳಿಸಿದ್ದರಿಂದ ಬಾಲಾ ದೇವಿ ಇನ್ನಷ್ಟು ದಿನಗಳನ್ನು ಗ್ಲಾಸ್ಗೊದಲ್ಲಿ ಕಳೆಯಬೇಕಿದೆ.

ಸದ್ಯ ಬಾಲಾದೇವಿ ಗ್ಲಾಸ್ಗೋದಲ್ಲಿ ತರಬೇತಿಯಲ್ಲಿ ನಿರತರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.