ಓಸ್ಮಾನ್ ಡೆಂಬೆಲೆ
ಪ್ಯಾರಿಸ್: ಫ್ರಾನ್ಸ್‌ನ ಓಸ್ಮಾನ್ ಡೆಂಬೆಲೆ ಅವರು 2025ನೇ ಸಾಲಿನ ಬ್ಯಾಲನ್ ಡಿ’ ಓರ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವರ್ಷದ ಶ್ರೇಷ್ಠ ಫುಟ್ಬಾಲಿಗರಿಗೆ ನೀಡುವ ಈ ಗೌರವ ಮಹಿಳೆಯರ ವಿಭಾಗದಲ್ಲಿ ಐತಾನಾ ಬೊನ್ಮತಿ (ಸ್ಪೇನ್) ಅವರಿಗೆ ಸಂದಿದೆ.
ಪಿಎಸ್‌ಜಿ ತಂಡದ ಫಾರ್ವರ್ಡ್ ಕೂಡ ಆಗಿರುವ ಡೆಂಬೆಲೆ ಅವರು ಸ್ಪೇನ್‌ನ ಯುವ ಪ್ರತಿಭೆ ಲಮಿನ್ ಯಮಾಲ್ ಅವರ ಪೈಪೋಟಿ ಎದುರಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾದರು. ಪಿಎಸ್‌ಜಿ ತಂಡ ಚಾಂಪಿಯನ್ಸ್ ಲೀಗ್ ಟ್ರೋಫಿ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
18 ವರ್ಷ ವಯಸ್ಸಿನ ಯಮಾಲ್ ರನ್ನರ್ ಅಪ್ ಆದರು. ಶ್ರೇಷ್ಠ ಯುವ ಆಟಗಾರ ಹೆಗ್ಗಳಿಕೆಗೆ ಅವರು ಪಾತ್ರರಾದರು. ಬೊನ್ಮತಿ ಬಾರ್ಸಿಲೋನಾ ಕ್ಲಬ್ ಪರ ಮಿಂಚಿದ್ದರು. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸೋಮವಾರ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.