ADVERTISEMENT

ಬಾಂಗ್ಲಾ ಶಾಲಾ ತಂಡಕ್ಕೆ ಗೆಲುವು

ಸುಬ್ರತೊ ಕಪ್‌ 17 ವರ್ಷದೊಳಗಿನವರ ಟೂರ್ನಿ

ಪಿಟಿಐ
Published 8 ಸೆಪ್ಟೆಂಬರ್ 2019, 18:49 IST
Last Updated 8 ಸೆಪ್ಟೆಂಬರ್ 2019, 18:49 IST

ನವದೆಹಲಿ: ಬಾಂಗ್ಲಾದೇಶದ ಕ್ರಿರಾ ಶಿಕ್ಷಾ ಪ್ರೊತಿಸ್ತಾನ ತಂಡಸುಬ್ರತೊ ಕಪ್‌ ಫುಟ್‌ಬಾಲ್‌ ಟೂರ್ನಿಯ (17 ವರ್ಷದವರು) ಪಂದ್ಯದಲ್ಲಿ ನವದೆಹಲಿ ಏರ್‌ಫೋರ್ಸ್‌ ಶಾಲಾ ತಂಡವನ್ನು 11–0 ಗೋಲುಗಳಿಂದ ಮಣಿಸಿದೆ.

ಭಾನುವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ 11 ಗೂರ್ಖಾ ರೈಫಲ್ಸ್ ರೆಜಿ ಮೆಂಟಲ್‌ ಕೇಂದ್ರ ತಂಡ ಇಂಫಾಲ್‌ ಸೈನಿಕ ಶಾಲಾ ತಂಡವನ್ನು 12–1ರಿಂದ, ‘ಬಿ’ ಗುಂಪಿನ ಪಂದ್ಯದಲ್ಲಿ ತ್ರಿಪುರ ಕ್ರೀಡಾ ಶಾಲಾ ತಂಡ ಭೋಪಾಲ್‌ ಸೈನಿಕ ಶಾಲಾ ತಂಡವನ್ನು 8–0 ಗೋಲುಗಳಿಂದ ಸೋಲಿಸಿದವು.

ಗುಂಪು ‘ಇ’ ನಲ್ಲಿ ಮಲಪ್ಪುರಂ ಎನ್‌ಎನ್‌ಎಂ ಎಚ್‌ಎಸ್ಎ‌ಸ್‌ ತಂಡವು ನವದೆಹಲಿಯ ಶ್ರೀರಾಂ ಶಾಲಾ ತಂಡವನ್ನು 12–3 ಗೋಲುಗಳಿಂದ ಮಣಿಸಿ ಸಂಭ್ರಮಿಸಿತು. ಎರಡೂ ಅವಧಿಯಲ್ಲೂ ವಿಜೇತ ತಂಡ ಮಿಂಚಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.