ADVERTISEMENT

ಫುಟ್‌ಬಾಲ್‌: ಎಫ್‌ಸಿ ಡೆಕ್ಕನ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 14:33 IST
Last Updated 9 ನವೆಂಬರ್ 2022, 14:33 IST
ಎಫ್‌ಸಿ ಡೆಕ್ಕನ್ (ಹಳದಿ ಪೋಷಾಕು) ಮತ್ತು ಬೆಂಗಳೂರು ಈಗಲ್ಸ್ ಆಟಗಾರರ ನಡುವಣ ಪೈಪೋಟಿ– ಪ್ರಜಾವಾಣಿ ಚಿತ್ರ/ ಬಿ.ಎಚ್‌. ಶಿವಕುಮಾರ್
ಎಫ್‌ಸಿ ಡೆಕ್ಕನ್ (ಹಳದಿ ಪೋಷಾಕು) ಮತ್ತು ಬೆಂಗಳೂರು ಈಗಲ್ಸ್ ಆಟಗಾರರ ನಡುವಣ ಪೈಪೋಟಿ– ಪ್ರಜಾವಾಣಿ ಚಿತ್ರ/ ಬಿ.ಎಚ್‌. ಶಿವಕುಮಾರ್   

ಬೆಂಗಳೂರು: ಪ್ರಸನ್ನಕುಮಾರ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ಎಫ್‌ಸಿ ಡೆಕ್ಕನ್ ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್‌ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಜಯ ಗಳಿಸಿತು.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿಎಫ್‌ಸಿ ಡೆಕ್ಕನ್ 4–0ಯಿಂದ ಬೆಂಗಳೂರು ಈಗಲ್ಸ್ ಎದುರು ಗೆದ್ದಿತು. ಪ್ರಸನ್ನಕುಮಾರ್ 58 ಮತ್ತು 61ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಶೆಲ್ಟನ್ ನಿಕ್ಸನ್‌ (9ನೇ ನಿ.) ಮತ್ತು ಹರ್ಷ ಉತೇಕರ್ (85ನೇ ನಿ.) ವಿಜೇತ ತಂಡದ ಪರ ಗೋಲು ಗಳಿಸಿದರು.

ಇನ್ನೊಂದು ಪಂದ್ಯದಲ್ಲಿ ಎಂಇಜಿ ಸೆಂಟರ್ ಎಫ್‌ಸಿ 1–1ರಿಂದ ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡದೊಂದಿಗೆ ಡ್ರಾ ಸಾಧಿಸಿತು. ಎಂಇಜಿ ಪರ ಸುಕೇಶ್ ಲಿಯೊನ್‌ ಕೆ. (28ನೇ ನಿ.) ಮತ್ತು ಕಿಕ್‌ಸ್ಟಾರ್ಟ್‌ ಪರ ಅರುಣ್‌ ಎ (90+1ನೇ ನಿ.) ಗೋಲು ಹೊಡೆದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.