ADVERTISEMENT

ಫುಟ್‌ಬಾಲ್‌: ಕೊಡಗು ತಂಡಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2023, 16:35 IST
Last Updated 21 ಆಗಸ್ಟ್ 2023, 16:35 IST
 ಫುಟ್‌ಬಾಲ್‌
ಫುಟ್‌ಬಾಲ್‌   

ಬೆಂಗಳೂರು: ಕೊಡಗು ಎಫ್‌.ಸಿ ತಂಡದವರು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 4–0ಯಿಂದ ಬಿಯುಎಫ್‌ಸಿ ತಂಡದವರನ್ನು ಮಣಿಸಿದರು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕೊಡಗು ತಂಡದ ಶ್ಲೋಕ್‌ ತಿವಾರಿ (46, 53ನೇ) ಎರಡು ಗೋಲು ಗಳಿಸಿ ಮಿಂಚಿದರೆ, ಹೈವಾನ್ಭಾ ದೇಖರ್ (60ನೇ), ಮದನ್ ಘೋಗಲೆ (86ನೇ) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು.

ಮತ್ತೊಂದು ಪಂದ್ಯದಲ್ಲಿ ರೂಟ್ಸ್‌ ಎಫ್‌.ಸಿ ತಂಡವು 6–0ಯಿಂದ ಯಂಗ್‌ ಚಾಲೆಂಜರ್ಸ್‌ ತಂಡವನ್ನು ಮಣಿಸಿತು. ರೂಟ್ಸ್‌ ತಂಡದ ಆರ್‌. ವಿಶಾಲ್‌ (48, 54ನೇ) ಮತ್ತು ರಿಧಿನ್ ಕೆ. ಧರ್ಮನ್ (50, 52ನೇ) ತಲಾ ಎರಡು ಗೋಲು ಗಳಿಸಿ ಗಮನ ಸೆಳೆದರು. ಯೋಹಾನ್ವಿಕ್ಟರ್ ಬ್ರಿಟ್ಟೊ (15ನೇ), ಗೌತಮ್‌ ರಾಜೇಶ್‌ (40ನೇ) ತಲಾ ಒಂದು ಗೋಲು ತಂದಿತ್ತರು.

ADVERTISEMENT

ಇಂದಿನ ಪಂದ್ಯಗಳು

ಬೆಂಗಳೂರು ಇಂಡಿಪೆಂಡೆಂಟ್ಸ್‌ ಎಫ್‌.ಸಿ– ರಿಯಲ್‌ ಚಿಕ್ಕಮಗಳೂರು ಎಫ್‌ಸಿ (ಮಧ್ಯಾಹ್ನ 1.30)

ಎಎಸ್‌ಸಿ ಅಂಡ್‌ ಸೆಂಟರ್‌ ಎಫ್‌ಸಿ – ಸ್ಟೋರ್ಟಿಂಗ್‌ ಕ್ಲಬ್‌ ಬೆಂಗಳೂರು (ಮಧ್ಯಾಹ್ನ 3.30)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.