ADVERTISEMENT

ಯಂಗ್‌ ಜಾಲೆಂಜರ್ಸ್‌ಗೆ ಜಯ

ಬಿಡಿಎಫ್‌ಎ ಲೀಗ್‌ ಫುಟ್‌ಬಾಲ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 19:33 IST
Last Updated 20 ನವೆಂಬರ್ 2019, 19:33 IST
 ಬಿಎಫ್‌ಸಿ ತಂಡದ ಲಿಯೊನ್‌ ಅಗಸ್ಟಿನ್‌ (ನೀಲಿ ಹಾಗೂ ಕೆಂಪು 31ನೇ ನಂ. ಪೋಷಾಕು) ಹೆಡರ್‌ ಮೂಲಕ ಗೋಲು ಗಳಿಸಲು ಯತ್ನಿಸಿದರು– ಪ್ರಜಾವಾಣಿ ಚಿತ್ರ– ಬಿ.ಎಚ್‌.ಶಿವಕುಮಾರ್‌
 ಬಿಎಫ್‌ಸಿ ತಂಡದ ಲಿಯೊನ್‌ ಅಗಸ್ಟಿನ್‌ (ನೀಲಿ ಹಾಗೂ ಕೆಂಪು 31ನೇ ನಂ. ಪೋಷಾಕು) ಹೆಡರ್‌ ಮೂಲಕ ಗೋಲು ಗಳಿಸಲು ಯತ್ನಿಸಿದರು– ಪ್ರಜಾವಾಣಿ ಚಿತ್ರ– ಬಿ.ಎಚ್‌.ಶಿವಕುಮಾರ್‌   

ಬೆಂಗಳೂರು: ಯಂಗ್‌ ಚಾಲೆಂಜರ್ಸ್ ಹಾಗೂ ಯೂನಿಯನ್‌ ಎಫ್‌ಸಿ ತಂಡಗಳು ಬಿಡಿಎಫ್‌ಎ ಎ ಡಿವಿಷನ್‌ ಲೀಗ್‌ ಪಂದ್ಯಗಳಲ್ಲಿ ಜಯದ ನಗೆ ಬೀರಿವೆ.

ಬುಧವಾರ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ ಯಂಗ್‌ ಚಾಲೆಂಜರ್ಸ್ ತಂಡವು ಬೆಂಗಳೂರು ಗನ್ನರ್ಸ್ ಎದುರು 2–1 ಗೋಲುಗಳಿಂದ ಗೆದ್ದಿತು. ವಿಜೇತ ತಂಡದ ಪರ ಆಯುಷ್‌ (30ನೇ ನಿಮಿಷ) ಹಾಗೂ ಕಿರಣ್‌ (49ನೇ ನಿಮಿಷ) ಗೋಲು ದಾಖಲಿಸಿದರು. ಬೆಂಗಳೂರು ಗನ್ನರ್ಸ್ ತಂಡದ ವಿಜಯ್‌ 19ನೇ ನಿಮಿಷ ಯಶಸ್ಸು ಕಂಡರು.

ಇನ್ನೊಂದು ಪಂದ್ಯದಲ್ಲಿ ಜವಾಹರ್‌ ಯೂನಿಯನ್‌ ಎಫ್‌ಸಿಯು 2–1ರಿಂದ ಡೆಕ್ಕನ್‌ ಎಫ್‌ಸಿ ಎದುರು ಜಯಿಸಿತು. ಜವಾಹರ್‌ ಪರ ನಿಖಿಲ್‌ (32ನೇ ನಿಮಿಷ) ಹಾಗೂ ಸೋನು (48ನೇ ನಿಮಿಷ) ಗೋಲು ಹೊಡೆದರು. ಪರಾಜಿತ ಡೆಕ್ಕನ್‌ ಪರ ಕೆ.ಡಿ.ಅರವಿಂದ್‌ (5ನೇ ನಿಮಿಷ) ಗೋಲು ದಾಖಲಿಸಿದರು.

ADVERTISEMENT

ಸೂಪರ್‌ ಡಿವಿಷನ್‌ ಲೀಗ್‌ ಹಣಾಹಣಿಯಲ್ಲಿ ಬಿಎಫ್‌ಸಿ ತಂಡವು ಎಡ್ಮಂಡ್‌ ಲಾಲ್‌ರಿಂದಿಕಾ (49ನೇ ನಿಮಿಷ) ಗಳಿಸಿದ ಗೋಲಿನ ಬಲದಿಂದ ಬೆಂಗಳೂರು ಈಗಲ್ಸ್ ಎಫ್‌ಸಿ ಎದುರು 1–0ಯಿಂದ ಗೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.