ADVERTISEMENT

ಫುಟ್‌ಬಾಲ್ | ನೆಕ್ಸ್ಟ್‌ಜೆನ್‌ ಕಪ್‌ ಟೂರ್ನಿ: ನಾಮ್‌ಗ್ಯಾಲ್‌ ಭುಟಿಯಾ ನೇತೃತ್ವ

ನೆಕ್ಸ್ಟ್‌ಜೆನ್‌ ಕಪ್‌ ಟೂರ್ನಿಗೆ ಬಿಎಫ್‌ಸಿ ತಂಡ

​ಪ್ರಜಾವಾಣಿ ವಾರ್ತೆ
Published 24 ಜುಲೈ 2022, 12:58 IST
Last Updated 24 ಜುಲೈ 2022, 12:58 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಇಂಗ್ಲೆಂಡ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ನೆಕ್ಸ್ಟ್‌ಜೆನ್ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಬೆಂಗಳೂರು ಎಫ್‌ಸಿ ತಂಡವನ್ನು ಡಿಫೆಂಡರ್‌ ನಾಮ್‌ಗ್ಯಾಲ್ ಭುಟಿಯಾ ಮುನ್ನಡೆಸಲಿದ್ದಾರೆ.

20 ಸದಸ್ಯರ ಬಿಎಫ್‌ಸಿ ತಂಡವನ್ನು ಭಾನುವಾರ ಪ್ರಕಟಿಸಲಾಗಿದ್ದು, ಇತ್ತೀಚೆಗಷ್ಟೇ ಒಪ್ಪಂದ ಮಾಡಿಕೊಂಡಿರುವ ಆಟಗಾರರಾದ ಫೆಲಿಕ್ಸನ್‌ ಫೆರ್ನಾಂಡಿಸ್‌, ಕ್ಲಾರೆನ್ಸ್‌ ಫೆರ್ನಾಂಡಿಸ್‌ ಮತ್ತು ಅಂಕಿತ್‌ ಪದ್ಮನಾಭನ್‌ ಅವರು ಸ್ಥಾನ ಪಡೆದುಕೊಂಡಿದ್ದಾರೆ.

‘ನೆಕ್ಸ್ಟ್‌ಜೆನ್ ಕಪ್‌ ಟೂರ್ನಿಯು ಇಂಗ್ಲೆಂಡ್‌ನ ಕೆಲವು ಪ್ರಮುಖ ಯೂತ್‌ ತಂಡಗಳ ಜತೆ ಆಡುವ ಅವಕಾಶವನ್ನು ನಮಗೆ ಒದಗಿಸಿದೆ. ಬಿಎಫ್‌ಸಿ ಎ ಮತ್ತು ಬಿ ತಂಡಗಳಲ್ಲಿ ಆಡಿದ ಆಟಗಾರರನ್ನು ಒಳಗೊಂಡಿರುವ ನಮ್ಮ ತಂಡ ಸಮತೋಲನದಿಂದ ಕೂಡಿದೆ’ ಎಂದು ಕೋಚ್‌ ನೌಶದ್‌ ಮೂಸಾ ಹೇಳಿದ್ದಾರೆ.

ADVERTISEMENT

ಬಿಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್ ತಂಡಗಳು ನೆಕ್ಸ್ಟ್‌ ಜೆನ್ ಕಪ್ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿವೆ. ರಿಲಯನ್ಸ್ ಫೌಂಡೇಷನ್ ಡೆವಲಪ್‌ಮೆಂಟ್ ಲೀಗ್‌ನಲ್ಲಿ ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ಮೂಲಕ ಈ ತಂಡಗಳು ಅರ್ಹತೆ ಗಳಿಸಿದ್ದವು.

ತಂಡ ಹೀಗಿದೆ: ಗೋಲ್‌ಕೀಪರ್ಸ್: ದೀಪೇಶ್ ಚೌಹಾಣ್, ಶರೊನ್ ಪದತ್ತಿಲ್.

ಡಿಫೆಂಡರ್ಸ್‌: ಫೆಲಿಕ್ಸನ್ ಫೆರ್ನಾಂಡಿಸ್, ಕ್ಲಾರೆನ್ಸ್‌ ಫೆರ್ನಾಂಡಿಸ್, ರಾಬಿನ್ ಯಾದವ್, ನಾಮ್‌ಗ್ಯಾಲ್ ಭುಟಿಯಾ, ರಾಜನ್‌ಬೀರ್‌ ಸಿಂಗ್, ತೊಮ್ತಿಂಗಾಂಬ ಮೀಟೆ

ಮಿಡ್‌ಫೀಲ್ಡರ್ಸ್: ಕಮಲೇಶ್‌ ಪಳನಿಸ್ವಾಮಿ, ಬೆಕೆ ಓರಮ್, ಸಿಂಘಿಲ್ ನಂಬ್ರತ್, ದಮೈತ್‌ಪಾಂಗ್ ಲಿಂಗ್ಡೊ, ಲಾಲ್‌ಮಿಂಗ್‌ಚುವಾಂಗ್ ಫನಾಯ್, ಲಾಲ್‌ಮೆತುವಾಂಗ ಫನಾಯ್/

ಸ್ಟ್ರೈಕರ್ಸ್‌: ಲಾಲ್‌ಪೆಕ್ಲುವ, ಮೊನೀರುಲ್‌ ಮೊಲ್ಲಾ, ಅಂಕಿತ್‌ ಪದ್ಮನಾಭನ್, ಥಾಯ್‌ ಸಿಂಗ್, ಶಿವಶಕ್ತಿ ನಾರಾಯಣನ್, ಆಕಾಶ್‌ದೀಪ್‌ ಸಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.