ADVERTISEMENT

ಇಂಡಿಯನ್‌ ಸೂಪರ್ ಲೀಗ್ ಫುಟ್‌ಬಾಲ್‌ ಟೂರ್ನಿ: ಚೆಟ್ರಿ ಬಳಗಕ್ಕೆ ಚೆನ್ನೈ ಸವಾಲು

ಇಂಡಿಯನ್‌ ಸೂಪರ್ ಲೀಗ್ ಫುಟ್‌ಬಾಲ್‌ ಟೂರ್ನಿ: ಬಿಎಫ್‌ಸಿಗೆ ಗೆಲುವಿನ ಹಂಬಲ

ಪಿಟಿಐ
Published 30 ಡಿಸೆಂಬರ್ 2021, 2:11 IST
Last Updated 30 ಡಿಸೆಂಬರ್ 2021, 2:11 IST
ಸುನಿಲ್ ಚೆಟ್ರಿ– ಪಿಟಿಐ ಚಿತ್ರ
ಸುನಿಲ್ ಚೆಟ್ರಿ– ಪಿಟಿಐ ಚಿತ್ರ   

ವಾಸ್ಕೊ: ಗೆಲುವಿಗಾಗಿ ಹಂಬಲಿಸುತ್ತಿರುವ ಬೆಂಗಳೂರು ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಗುರುವಾರ ಚೆನ್ನೈಯಿನ್‌ ಎಫ್‌ಸಿ ಸವಾಲು ಎದುರಿಸಲಿದೆ.

ಕಳೆದ ಏಳು ಪಂದ್ಯಗಳಲ್ಲಿಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ಗೆಲುವು ಕಂಡಿಲ್ಲ. ಏಳು ಪಂದ್ಯಗಳನ್ನು ಆಡಿರುವ ಚೆನ್ನೈಯಿನ್ ತಂಡವು 11 ಪಾಯಿಂಟ್ಸ್‌ನೊಂದಿಗೆ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

ಪಾಯಿಂಟ್ಸ್ ಪಟ್ಟಿಯಲ್ಲಿ ಬೆಂಗಳೂರು 10ನೇ ಸ್ಥಾನದಲ್ಲಿದೆ. ನಾಯಕ ಚೆಟ್ರಿ ಅವರು ಲಯದಲ್ಲಿಲ್ಲದಿರುವುದು ತಂಡದ ಕಳವಳಕ್ಕೆ ಕಾರಣವಾಗಿದೆ. ಇದೇ ಕಾರಣವಾಗಿ ಕೋಚ್‌ ಮಾರ್ಕೊ ಪೆಜೌಲಿ ಕಳೆದ ಎರಡು ಪಂದ್ಯಗಳಲ್ಲಿ ಸುನಿಲ್‌ ಅವರನ್ನು ಕಣಕ್ಕಿಳಿಸಿರಲಿಲ್ಲ. ಈ ಪಂದ್ಯದಲ್ಲಿ ಅವರು ಆಡುವ ನಿರೀಕ್ಷೆಯಿದೆ.

ADVERTISEMENT

ಬೆಂಗಳೂರು ಎದುರು ಆಡಿದ ಕಳೆದ ನಾಲ್ಕು ಪಂದ್ಯಗಳಲ್ಲಿ ಚೆನ್ನೈ ತಂಡಕ್ಕೆ ಗೋಲು ಗಳಿಸಲು ಸಾಧ್ಯವಾಗಿಲ್ಲ. ಈ ಪಂದ್ಯದಲ್ಲಿ ಆ ಕೊರತೆಯನ್ನು ನೀಗಿಸುವ ಛಲದಲ್ಲಿದೆ.

ಮುಖಾಮುಖಿ ಪಂದ್ಯಗಳು 9
ಬೆಂಗಳೂರು ಗೆಲುವು 4
ಚೆನ್ನೈಯಿನ್ ಜಯ 3
ಡ್ರಾ 2

ಮುಖಾಮುಖಿಯಲ್ಲಿ ಗೋಲು
ಬೆಂಗಳೂರು 12
ಚೆನ್ನೈಯಿನ್ 8

ಪಂದ್ಯ ಆರಂಭ: ರಾತ್ರಿ 7.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.