ADVERTISEMENT

ಚೆಟ್ರಿಗೆ 150ನೇ ಪಂದ್ಯ: ಎಐಎಫ್‌ಎಫ್‌ ಗೌರವ

ಪಿಟಿಐ
Published 24 ಮಾರ್ಚ್ 2024, 4:48 IST
Last Updated 24 ಮಾರ್ಚ್ 2024, 4:48 IST
Sunil Chhetry of Bengaluru Football Club in action at ISL football match Bengaluru Football Club vs East Bengal at Sree Kanteerava Stadium in Bengaluru on Wednesday, 04th October 2023. DH Photo/ S K Dinesh
Sunil Chhetry of Bengaluru Football Club in action at ISL football match Bengaluru Football Club vs East Bengal at Sree Kanteerava Stadium in Bengaluru on Wednesday, 04th October 2023. DH Photo/ S K Dinesh   

ನವದೆಹಲಿ: ಪಾಕಿಸ್ತಾನದ ವಿರುದ್ಧ ಪದಾರ್ಪಣೆ ಮಾಡಿದ ಸುಮಾರು ಎರಡು ದಶಕಗಳ ನಂತರ, ಭಾರತದ ನಾಯಕ ಸುನಿಲ್ ಚೆಟ್ರಿ ಅವರು ಮಂಗಳವಾರ ಗುವಾಹಟಿಯಲ್ಲಿ ಅಫ್ಗಾನಿಸ್ತಾನ ವಿರುದ್ಧದ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ತಮ್ಮ 150 ನೇ ಅಂತರರಾಷ್ಟ್ರೀಯ ಪಂದ್ಯ ಆಡುತ್ತಿದ್ದಾರೆ.  

2026ರ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಎರಡನೇ ಸುತ್ತಿನಲ್ಲಿ ಭಾರತವು ಅಫ್ಗಾನಿಸ್ತಾನ ವಿರುದ್ಧ ಗೋಲ್ ರಹಿತ ಡ್ರಾ ಸಾಧಿಸಿತು.

ಈ ಮೂಲಕ ಪೋರ್ಚುಗೀಸ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ (205) ಅಗ್ರಸ್ಥಾನದಲ್ಲಿದ್ದರೆ, 150 ಅಥವಾ ಅದಕ್ಕಿಂತ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ವಿಶ್ವದ 40ನೇ ಆಟಗಾರ ಎಂಬ ಹೆಗ್ಗಳಿಕೆಗೆ ಚೆಟ್ರಿ ಪಾತ್ರರಾಗಲಿದ್ದಾರೆ.

ADVERTISEMENT

ಈ ಸಂದರ್ಭದಲ್ಲಿ ಚೆಟ್ರಿ ಅವರನ್ನು ಸನ್ಮಾನಿಸುವುದಾಗಿ ಎಐಎಫ್ಎಫ್ ಘೋಷಿಸಿದೆ.

2005ರ ಜೂನ್ 12ರಂದು ಕ್ವೆಟ್ಟಾದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಚೆಟ್ರಿ ಮೊದಲ ಬಾರಿಗೆ ರಾಷ್ಟ್ರೀಯ  ತಂಡದ ಪರ ಆಡಿದ್ದರು. 1-1 ರಿಂದ ಸಮಬಲ ಸಾಧಿಸಿದ್ದ ಪಂದ್ಯದಲ್ಲಿ ಅವರು ಒಂದು ಗೋಲು ಗಳಿಸಿದ್ದರು.  ಈವರೆಗೂ 149 ಪಂದ್ಯಗಳನ್ನು ಆಡಿ, ದಾಖಲೆಯ 93 ಗೋಲುಗಳನ್ನು ಗಳಿಸಿದ್ದಾರೆ.

39 ವರ್ಷದ ಆಟಗಾರ ಬ್ಲೂ ಟೈಗರ್ಸ್‌ ಪರ ಪ್ರಥಮ, 25, 50, 75, 100 ಮತ್ತು 125ನೇ ಪಂದ್ಯಗಳಲ್ಲಿ ಕನಿಷ್ಠ ಒಂದು ಗೋಲು ಗಳಿಸಿದ ವಿಶಿಷ್ಟ ದಾಖಲೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.