ADVERTISEMENT

ಚೀನಾ: ಫುಟ್‌ಬಾಲ್ ಆಟಗಾರರ ವೇತನ ನಿಯಂತ್ರಣ

ಏಜೆನ್ಸೀಸ್
Published 20 ಡಿಸೆಂಬರ್ 2018, 19:42 IST
Last Updated 20 ಡಿಸೆಂಬರ್ 2018, 19:42 IST

ಶಾಂಘೈ: ವೆಚ್ಚ ನಿಯಂತ್ರಣಕ್ಕೆ ಮುಂದಾಗಿರುವ ಚೀನಾ ಫುಟ್‌ಬಾಲ್ ಸಂಸ್ಥೆ ರಾಷ್ಟ್ರೀಯ ಆಟಗಾರರ ವೇತನವನ್ನು ಗಣನೀಯವಾಗಿ ಕಡಿಮೆ ಮಾಡಲು ನಿರ್ಧರಿಸಿದೆ.

ದೇಶಿ ಟೂರ್ನಿಗಳಲ್ಲಿ ಆಡುವ ಆಟಗಾರರ ಆರ್ಥಿಕ ನೆರವಿನ ಮೇಲೆಯೂ ನಿಯಂತ್ರಣಕ್ಕೆ ಸಂಸ್ಥೆ ಮುಂದಾಗಿದೆ ಎಂದು ಕ್ರೀಡಾ ಚಾನ ಲ್‌ಗಳು ಮತ್ತು ಇತರ ಮಾಧ್ಯಮಗಳು ವರದಿ ಮಾಡಿವೆ.

ಸದ್ಯದಲ್ಲೇ ಆರಂಭವಾಗುವ ಚೀನಾ ಸೂಪರ್‌ ಲೀಗ್‌ನಲ್ಲಿ ತಂಡಗಳು ವ್ಯಯಿಸುವ ಮೊತ್ತಕ್ಕೆ ಮಿತಿ ಹಾಕಲಾಗಿದೆ. ಇದರಿಂದ ವಿದೇಶಿ ಆಟಗಾರರಿಗೆ ತೊಂದರೆ ಇಲ್ಲ ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.