ಪ್ಯಾರಿಸ್: ಪೋರ್ಚುಗಲ್ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದರು. ಅತಿ ಹೆಚ್ಚು ಗೋಲು ಗಳಿಸಿದ ಆಟಗಾರನಾದರು.
ಇಲ್ಲಿ ನಡೆಯುತ್ತಿರುವ 2022ರ ವಿಶ್ವಕಪ್ ಕ್ವಾಲಿಫೈಯಿಂಗ್ ಟೂರ್ನಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಪೋರ್ಚುಗಲ್ ತಂಡವು 2–1ರಿಂದ ಐರ್ಲೆಂಡ್ ವಿರುದ್ಧ ಜಯಿಸಿತು. 36 ವರ್ಷದ ರೊನಾಲ್ಡೊ 89ನೇ ನಿಮಿಷ ಮತ್ತು ಇಂಜುರಿ ಸಮಯದಲ್ಲಿ ಬಾರಿಸಿದ ಗೋಲುಗಳಿಂದಾಗಿ ಪೋರ್ಚುಗಲ್ ಗೆದ್ದಿತು. ರೊನಾಲ್ಡೊ ಅಗ್ರಸ್ಥಾನಕ್ಕೇರಿದರು.
ಐದು ಬಾರಿ ಬ್ಯಾಲನ್ ಡಿ ಒರ್ ಪ್ರಶಸ್ತಿ ಗೆದ್ದಿರುವ ಅವರು, ‘ಈ ದಾಖಲನೆ ನನ್ನದಾಗಿರುವುದು ಅತೀವ ಸಂತಸವಾಗುತ್ತಿದೆ. ಇದೊಂದು ಅತ್ಯಂತ ಹೆಮ್ಮೆಯ ಕ್ಷಣ’ ಎಂದು ರೋನಾಲ್ಡೊ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.