ADVERTISEMENT

ಸಿಟಿ ಎಫ್‌ಜಿ ತೆಕ್ಕೆಗೆ ಮುಂಬೈ ಎಫ್‌ಸಿ ತಂಡ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 18:52 IST
Last Updated 28 ನವೆಂಬರ್ 2019, 18:52 IST

ಮುಂಬೈ: ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಚಾಂಪಿಯನ್ ಮ್ಯಾಂಚೆಸ್ಟರ್‌ ಸಿಟಿಯ ಮಾತೃ ಕಂಪನಿ ಸಿಟಿ ಫುಟ್‌ಬಾಲ್‌ ಗ್ರೂಪ್‌ (ಸಿಎಫ್‌ಜಿ), ಗುರುವಾರ ಐಎಸ್‌ಎಲ್‌ನ ಪ್ರಾಂಚೈಸ್‌ ಮುಂಬೈ ಸಿಟಿ ಎಫ್‌ಸಿಯ ಶೇ 65ರಷ್ಟು ಷೇರುಗಳನ್ನು ಖರೀದಿಸಿದೆ.

ಇದೇ ಮೊದಲ ಬಾರಿ ಯುರೋಪ್‌ನ ಪ್ರಮುಖ ಕ್ಲಬ್‌ವೊಂದು ಭಾರತದ ಫುಟ್‌ಬಾಲ್‌ ಕ್ಲಬ್‌ನ ಬಹುಪಾಲು ಷೇರು ಖರೀದಿಸಿದಂತಾಗಿದೆ. ಈ ಮೂಲಕ ಹೆಸರಾಂತ ಮ್ಯಾನೇಜರ್‌ ಪೆಪ್‌ ಗಾರ್ಡೊಲಿಯಾ ಭಾರತಕ್ಕೆ ಹತ್ತಿರವಾಗುವ
ನಿರೀಕ್ಷೆಯಿದೆ.

ಕ್ಲಬ್‌ ಅಭಿಮಾನಿಗಳ ಎದುರು ಸಿಎಫ್‌ಜಿಯ ಸಿಇಒ ಫೆರಾನ್‌ ಸೊರಿಯಾನೊ ಅವರು ಫುಟ್‌ಬಾಲ್‌ ಸ್ಪೋರ್ಟ್ಸ್‌ ಡೆವಲಪ್‌ಮೆಂಟ್‌ ಲಿಮಿಟೆಡ್‌ ಮತ್ತು ರಿಲಯನ್ಸ್‌ ಫೌಂಡೇಷನ್‌ ಮುಖ್ಯಸ್ಥರಾಗಿರುವ ನೀತಾ ಅಂಬಾನಿ ಈ ಸುದ್ದಿಯನ್ನು ಪ್ರಕಟಿಸಿದರು.

ADVERTISEMENT

‘ಫುಟ್‌ಬಾಲ್‌ನ ಜಾಗತಿಕ ಶಕ್ತಿಕೇಂದ್ರವನ್ನು ನಾವು ಭಾರತಕ್ಕೆ, ಐಎಸ್‌ಎಲ್‌ ಮತ್ತು ಭಾರತದ ಫುಟ್‌ಬಾಲ್‌ಗೆ ಸ್ವಾಗತಿಸುತ್ತಿದ್ದೇವೆ. ಸಿಟಿ ಫುಟ್‌ಬಾಲ್‌ ಕ್ಲಬ್‌, ಮುಂಬೈ ಸಿಟಿ ಎಫ್‌ಸಿಯ ಬಹುಪಾಲು ಷೇರುಗಳನ್ನು ಖರೀದಿಸಿದೆ ಎಂದು ಹೇಳಲು ಸಂತಸವಾಗುತ್ತಿದೆ’ ಎಂದು ನೀತಾ ಅಂಬಾನಿ ಪ್ರಕಟಿಸಿದರು.

ಈ ಚಾರಿತ್ರಿಕ ಪಾಲುದಾರಿಕೆಯಿಂದ ಮುಂಬೈ ಸಿಟಿ ಎಫ್‌ಸಿ ಮತ್ತು ಭಾರತದ ಫುಟ್‌ಬಾಲ್‌ಗೆ ಲಾಭವಾಗಲಿದೆ ಎಂಬ ವಿಶ್ವಾಸವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.