ADVERTISEMENT

ಸಂತೋಷ್ ಟ್ರೋಫಿ: ಕರ್ನಾಟಕ–ಮಿಜೋರಾಂ ಪಂದ್ಯ ಡ್ರಾ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 16:29 IST
Last Updated 24 ಫೆಬ್ರುವರಿ 2024, 16:29 IST
   

ಯುಪಿಯಾ (ಅರುಣಾಚಲ ಪ್ರದೇಶ): ಹಾಲಿ ಚಾಂಪಿಯನ್ ಕರ್ನಾಟಕ ತಂಡವು ಶನಿವಾರ ನಡೆದ ಸಂತೋಷ್ ಟ್ರೋಫಿ ಅಂತಿಮ ಸುತ್ತಿನ 'ಬಿ' ಗುಂಪಿನ ಪಂದ್ಯದಲ್ಲಿ ಮಿಜೋರಾಂ ವಿರುದ್ಧ 2-2 ಗೋಲುಗಳ ಸಮಬಲ ಸಾಧಿಸಿತು.

ಎಂ.ಎಸ್.ಡಾಂಗ್ಲಿಯಾನಾ (13ನೇ ನಿಮಿಷ) ಮತ್ತು ಎಂ.ಸಿ.ಮಾಲ್ಸಾವ್ಜುವಾಲಾ (47ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಮಿಜೋರಾಂ ಮೂರು ಅಂಕಗಳನ್ನು ಗಳಿಸಿತು. 

ಆದರೆ ದ್ವಿತೀಯಾರ್ಧದಲ್ಲಿ ಪ್ರಬಿನ್ ಟಿಗ್ಗಾ (67ನೇ ನಿಮಿಷ) ಮತ್ತು ಆರ್.ವಿಶಾಲ್ (69ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಕರ್ನಾಟಕ ಎರಡು ಗೋಲು ಗಳಿಸಿತು. 

ADVERTISEMENT

ಗುರುವಾರ ನಡೆದ ಪಂದ್ಯದಲ್ಲೂ ಡೆಲ್ಲಿ ವಿರುದ್ಧ 1-1 ಗೋಲುಗಳ ಅಂತರದಲ್ಲಿ ಕರ್ನಾಟಕ ಡ್ರಾ ಸಾಧಿಸಿತ್ತು. ಆರಂಭಿಕ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಮಿಜೋರಾಂ 1-3 ಗೋಲುಗಳಿಂದ ಸೋಲನುಭವಿಸಿತ್ತು.

ಕಳೆದ ಆವೃತ್ತಿಯಲ್ಲಿ ಸೌದಿ ಅರೇಬಿಯಾದಲ್ಲಿ ನಡೆದ ಫೈನಲ್‌ನಲ್ಲಿ ಮೇಘಾಲಯ ಸೋಲಿಸಿ ಕರ್ನಾಟಕ ಪ್ರಶಸ್ತಿ ಗೆದ್ದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.